ಜಿಲ್ಲೆ

ಪಿಡಬ್ಲುೃಡಿ ಕ್ಯಾಂಪ್‌ನಲ್ಲಿ ಶಾರ್ಟ್‌ಸರ್ಕ್ಯೂಟ್‌, ಶೆಡ್‌ಗಳಿಗೆ ಬೆಂಕಿ

ಶಶಿಧರ ಎಲ್

ಸಿಂಧನೂರು: ನಗರದ ಪಿಡಬ್ಲುೃಡಿ ಕ್ಯಾಂಪ್‌ನಲ್ಲಿ ಮೆಕಾನಿಕ್ ಅಂಗಡಿಯ ಶೆಡ್‌ಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಶುಕ್ರವಾರ ರಾತ್ರಿ ಬೆಂಕಿ ತಗುಲಿದೆ. ರಫಿ, ಪ್ರಕಾಶ್ ರಾವ್, ಅಜ್ಮತ್, ನಜೀರ್, ಹನುಮೇಶ್, ಅರ್ಬಾಜ್, ಆಸೀಫ್ ಎನ್ನುವವರಿಗೆ ಸೇರಿದ ಅಂಗಡಿಗಳಿಗೆ ಬೆಂಕಿ ತಗುಲಿದೆ.

ಕಾರುಗಳು, ಅಂಗಡಿ ಒಳಗಿರುವ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ನಡೆದಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ಅಂಗಡಿಗಳ ಮಾಲೀಕರು ಆಗ್ರಹಿಸಿದರು.