ಜಿಲ್ಲೆ

ನ್ಯೂ ಭಾರತ್ ಪತ್ತಿನ ಸೌಹಾರ್ದ ಸಹಕಾರ ಸಂಘಕ್ಕೆ 54 ಲಕ್ಷ ರೂ. ನಿವ್ವಳ ಲಾಭ

ಪ್ರವೀಣ ಉದುಸಾ ದಲಬಂಜನ್

ಸಿಂಧನೂರು: ಸ್ಥಳೀಯ ನ್ಯೂ ಭಾರತ್ ಪತ್ತಿನ ಸೌಹಾರ್ದ ಸಹಕಾರಿ ಸಂಘವು 2024-25 ನೇ ಸಾಲಿನಲ್ಲಿ 54,02,821 ರೂ.ನಿವ್ವಳ ಲಾಭಗಳಿಸಿದೆ ಎಂದು ಸಹಕಾರಿ ಸಂಘ ಅಧ್ಯಕ್ಷ ಬಸವರಾಜ ಹರಸೂರು ಹೇಳಿದರು.

ನಗರದ ಸಹಕಾರಿ ಸಂಘದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸದಸ್ಯರ, ಷೇರುದಾರರ ಹಾಗೂ ಸಹಕಾರಿ ಸಂಘದ ಸಿಬ್ಬಂದಿ ವರ್ಗದವರ ಬೆಂಬಲದಿಂದ ಇಂದು ಸಹಕಾರಿಯು ಅತ್ಯುತ್ತಮವಾಗಿ ಬೆಳವಣಿಗೆ ಕಂಡಿದೆ. ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ಸಹಕಾರಿಯಿಂದ ಪಡೆದ ಸಾಲವನ್ನು ಅವಧಿಯೊಳಗೆ ಮರುಪಾವತಿಸಿದಾಗ ಎಲ್ಲರಿಗೂ ಅನುಕೂಲವಾಗಲಿದೆಂದರು.

ಸಹಕಾರಿ ಸಂಘದ ನಿರ್ದೇಶಕರಾದ ಚಿದಾನಂದ ಸಿ., ಕರುಣಾಕರ ಭಂಗಿ, ಸೈಯ್ಯದ್ ಅಬೀದ್ ಹುಸೇನ, ಕೆ.ಅಂಬಣ್ಣ, ಸುಗೂರೇಶ ಬಪ್ಪೂರ, ನಾಗರಾಜ ತಾವರಗೇರಾ, ವಿಶ್ವನಾಥ ಹಿರೇಮಠ, ಲಕ್ಷ್ಮೀ ಮಂಜುನಾಥ, ಅನುಷಾ ಪ್ರಕಾಶ, ಅಂಬಿಕಾ ವೆಂಕಟೇಶ, ಸಂಗೀತ ಗುರು, ಹನುಮಪ್ಪ ಇದ್ದರು.