ಸಿಂಧನೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿಗೆ ಗುರುವಾರ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಮನವಿ ಸಲ್ಲಿಸಲಾಯಿತು. ಮಠದ ವಿಚಾರಣಾ ಕರ್ತ ರಾಘವೇಂದ್ರ ಕುಲಕರ್ಣಿ, ವಕೀಲರಾದ ಗೋಪಾಲ ಆಚಾರ್ ಜೋಶಿ, ಪ್ರಹ್ಲಾದ ಗುಡಿ, ಬ್ರಾಹ್ಮಣ ಸಮುದಾಯದ ಕಾರ್ಯದರ್ಶಿ ಆನಂದ ಗೌರಕರ್, ನಬಿಸಾಬ್, ಪ್ರಭಾಕರ ದೇಶಪಾಂಡೆ ಇದ್ದರು. 
ಜಿಲ್ಲೆ

ಮಠಕ್ಕೆ ₹10 ಲಕ್ಷ ಅನುದಾನ ನೀಡಿ

ಸಿಂಧನೂರು: ನಗರದ ಯಲ್ಲಮ್ಮ ದೇವಸ್ಥಾನದ ಬಳಿಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ ಅನುದಾನ ನೀಡಲು ಒತ್ತಾಯಿಸಿ ಮಠದಿಂದ ಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಕಳೆದ ಆರು ವರ್ಷಗಳ ಹಿಂದೆ ರಾಘವೇಂದ್ರ ಸ್ವಾಮಿಗಳ ಮಠ ಸಿಂಧನೂರಿನಲ್ಲಿ ನಿರ್ಮಾಣಗೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶೇಷವಾಗಿ ಗುರುವಾರ ರಾಯರ ರಥೋತ್ಸವ ನಡೆಯುತ್ತದೆ. ಅಂದು ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಅಲ್ಲದೆ ಪ್ರತಿವರ್ಷ ರಾಯರ ಆರಾಧನೆ ಮಹೋತ್ಸವ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಯರ ದರ್ಶನ ಪಡೆಯುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸ್ಥಳಾವಕಾಶದ ಕೊರತೆ ಇರುವುದರಿಂದ ಮಠದ ದಕ್ಷಿಣ ಭಾಗದಲ್ಲಿ ಈಗಾಗಲೇ ರಾಜ್ಯಸಭೆಯ ಮಾಜಿ ಸದಸ್ಯ ವೆಂಕಯ್ಯ ನಾಯ್ಡು ಅವರ ಅನುದಾನದಲ್ಲಿ ಕಟ್ಟಲ್ಪಟ್ಟಿರುವ ಕಟ್ಟಡದ ಮೇಲ್ಭಾಗದಲ್ಲಿ ಸಮುದಾಯ ಭವನ ನಿರ್ಮಿಸಿದರೆ ಭಕ್ತರಿಗೆ ಹೆಚ್ಚು ಅನುಕೂಲವಾಗುತ್ತದೆಂದು ಎಂದು ಒತ್ತಾಯಿಸಿದರು.