ಸಿಂಧನೂರಿನ ತಾಪಂ ಇಒ ಚಂದ್ರಶೇಖರ ಅವರಿಗೆ ಗ್ರಾಪಂ ಸದಸ್ಯರ ತಾಲೂಕು ಒಕ್ಕೂಟ ಮನವಿ ಸಲ್ಲಿಸಿತು. ಒಕ್ಕೂಟದ ತಾಲೂಕು ಅಧ್ಯಕ್ಷ ಮಹಾಂತೇಶ ಹಿರೇಗೌಡ್ರ, ಪ್ರಧಾನ ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ, ಸದಸ್ಯರಾದ ಶ್ರೀಧರಗೌಡ ಹೊಸಳ್ಳಿ, ಹುಸೇನಪ್ಪ, ಶರಣಪ್ಪ ನಾಯಕ, ಎಸ್.ಎಂ.ಖಾದ್ರಿ ಇದ್ದರು. 
ಜಿಲ್ಲೆ

ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿ

ಸಿಂಧನೂರು: ಬಡ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ ಯೋಜನೆ, ರಾಜೀವಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನೀಡಲು ಕೂಡಲೇ ಗ್ರಾಪಂಗಳಿಗೆ ಮನೆಗಳ ಮಂಜೂರಾತಿ ನೀಡಲು ಒತ್ತಾಯಿಸಿ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟ ಶುಕ್ರವಾರ ತಾಪಂ ಇಒ ಚಂದ್ರಶೇಖರ ಮನವಿ ಸಲ್ಲಿಸಿತು.

ರಾಜ್ಯದ ಎಲ್ಲ ಗ್ರಾಪಂಗಳಿಗೆ ಬಹು ವರ್ಷಗಳಿಂದ ಮನೆ ಮಂಜೂರಾತಿ ಆಗಿಲ್ಲ. ಗ್ರಾಪಂ ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದ ಮೇಲೆ 2021-22 ನೇ ಸಾಲಿನಲ್ಲಿ 20-30 ಮನೆಗಳು ಬಂದಿವೆ. ಆದರೆ ಇಲ್ಲಿಯವರೆಗೆ ಮನೆಗಳು ಮಂಜೂರಾಗಿಲ್ಲ. ಈ ಹಿಂದೆ ಫಲಾನುಭವಿಗಳಿಗೆ ನೀಡಿದ ಮನೆಗಳ ಬಿಲ್ ಕೂಡ ಸರಿಯಾಗಿ ಪಾವತಿಯಾಗಿಲ್ಲ. ಪಂಚಾಯಿತಿಗಳ ಮಟ್ಟದಲ್ಲಿ ಸತತ ಮಳೆಯಿಂದ ಮನೆಗಳು ಬಿದ್ದು ಬಡ ಕುಟುಂಬಗಳು ಬೀದಿ ಪಾಲಾಗಿವೆ. ವಸತಿ ಸೌಲಭ್ಯ ಕಲ್ಪಿಸಿಕೊಡಲು ಪಂಚಾಯಿತಿಗಳಿಗೆ ಫಲಾನುಭವಿಗಳು ಗ್ರಾಪಂಗೆ ಬರುತ್ತಿದ್ದಾರೆ. ಕೂಡಲೇ ವಸತಿ ಯೋಜನೆಯಡಿ ಮನೆ ಮಂಜೂರಾತಿ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.