ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಹೊಸ ಕಮಿಷನ್ ನೀತಿ ಜಾರಿಗೆ ವಿರೋಧಿಸಿ ವಿಮಾ ಪ್ರತಿನಿಧಿಗಳು ಸಿಂಧನೂರಿನ ಎಲ್‌ಐಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಹೊಸ ಕಮಿಷನ್ ನೀತಿ ಜಾರಿಗೆ ವಿರೋಧ

ಸಿಂಧನೂರು: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಹೊಸ ಕಮಿಷನ್ ನೀತಿ ಜಾರಿಗೊಳಿಸಲು ಹೊರಟಿರುವ ಕ್ರಮ ವಿರೋಧಿಸಿ ಜೀವ ವಿಮಾ ನಿಗಮದ ಪ್ರತಿನಿಧಿಗಳು ಕಪ್ಪು ಬ್ಯಾಡ್ಜ್ ಧರಿಸಿ, ಎಲ್‌ಐಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿನಿಧಿಗಳ ಗೌರವಕ್ಕೆ ಕುಂದು ತರುವ ಹೊಸ ಕಮಿಷನ್ ನೀತಿಯನ್ನು ಜಾರಿ ಖಂಡನಾರ್ಹ. ವಿಮಾ ಪ್ರತಿನಿಧಿಗಳ ಹಿತ ಕಾಪಾಡುವ ಬದಲು ಅವರ ಬದುಕಿಗೆ ಕೊಳ್ಳಿ ಇಡಲು ಮುಂದಾಗಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದರೆ ಹಂತ ಹಂತವಾಗಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.