ಜವಳಗೇರಾ ಗ್ರಾಮದಲ್ಲಿ ಶನಿವಾರ ವೆಂಕಟೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಮಾಜಿ ಸಚಿವ ವೆಂಕಟರಾವ ನಾಡಗೌಡ, ಸಂಗಮೇಶ್ವರ ನಾಡಗೌಡ, ಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ ಇತರರಿದ್ದರು . 
ಜಿಲ್ಲೆ

ವೆಂಕಟೇಶ್ವರ ರಥೋತ್ಸವ ಅದ್ದೂರಿ

ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಶನಿವಾರ ಸಂಜೆ ದಸರಾ ಹಿನ್ನೆಲೆಯಲ್ಲಿ ವೆಂಕಟೇಶ್ವರ ರಥೋತ್ಸವ ಅದ್ದೂರಿಯಿಂದ ನಡೆಯಿತು.

ಬೆಳಗ್ಗೆ ವೆಂಕಟೇಶ್ಚರ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ನಾಡಗೌಡ ವಂಶಸ್ಥರಿಂದ ಅನ್ನ ದಾಸೋಹ ಸೇವೆ ನಡೆಯಿತು. ಸಂಜೆ ವೆಂಕಟೇಶ್ವರ ರಥೋತ್ಸವಕ್ಕೆ ಮಾಜಿ ಸಚಿವ ಹಾಗೂ ನಾಡಗೌಡ ವಂಶಸ್ಥ ವೆಂಕಟರಾವ ನಾಡಗೌಡ ಚಾಲನೆ ನೀಡಿದರು. ಮುಖ್ಯ ಬೀದಿಯಲ್ಲಿ ರಥ ಸಾಗುತ್ತಿದ್ದಂತೆ ಭಕ್ತರು ಉದ್ಘೋಷ ಹಾಕಿ, ಉತ್ತತ್ತಿ-ಬಾಳೆಹಣ್ಣು ಅರ್ಪಿಸಿದರು. ಜಿಪಂ ಮಾಜಿ ಸದಸ್ಯ ಸಂಗಮೇಶ್ವರ ನಾಡಗೌಡ, ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಶರಣಬಸವರಾಜ ನಾಡಗೌಡ ಹಾಗೂ ಪ್ರಮುಖರು ಇದ್ದರು.