ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಬಿಜೆಪಿಯಿಂದ ಸಿಂಧನೂರಿನ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಸಿಂಧನೂರಿನಲ್ಲಿ ಬಿಜೆಪಿಯಿಂದ ಸ್ವಚ್ಛತಾ ಕಾರ್ಯ

ಪ್ರವೀಣ ಉದುಸಾ ದಲಬಂಜನ್

ಸಿಂಧನೂರು: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಆಶಯ, ಸಂಕಲ್ಪದಂತೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ನಿಮಿತ್ತ ಬಿಜೆಪಿಯಿಂದ ನಗರದ ಪ್ರಮುಖ ಮಹನೀಯರ ವೃತ್ತಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯ, ಶಿವಶರಣೆ ಅಕ್ಕಮಹಾದೇವಿ ವೃತ್ತ, ರಾಷ್ಟ್ರಪಿತ ಮಹಾತ್ಮಾಗಾಂಧಿ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಜಗಜ್ಯೋತಿ ಬಸವೇಶ್ವರ ವೃತ್ತ, ಬಾಬು ಜಗಜೀವನ್‌ರಾಂ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ನಂತರ ದಾಸ ಶ್ರೇಷ್ಠ ಕನಕದಾಸ ವೃತ್ತದಲ್ಲಿ ಸ್ವಚ್ಛತಾ ಕಾರ್ಯವನ್ನು ಅಂತಿಮಗೊಳಿಸಲಾಯಿತು.

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರು, ಪ್ರಧಾನ ಕಾರ್ಯದರ್ಶಿ ರವಿ ರಾಥೋಡ, ಪ್ರಕಾಶ ಹಚ್ಚೊಳ್ಳಿ, ಉಪಾಧ್ಯಕ್ಷರಾದ ಸೋಮಣ್ಣ ಪತ್ತಾರ್, ನಾಗರಾಜ ದೇವರಗುಡಿ, ಕೋಶಾಧ್ಯಕ್ಷ ಬಸವರಾಜ ಸಿದ್ದಾಂತಿಮಠ, ಕಾನೂನು ಪ್ರಕೋಷ್ಠಕದ ಸಂಚಾಲಕ ಸಿದ್ಧಲಿಂಗಯ್ಯಸ್ವಾಮಿ ವಕೀಲ, ನಗರಸಭೆ ಸದಸ್ಯ ಕೆ.ರಾಜಶೇಖರ, ಮಾಜಿ ನಗರ ಸಭೆ ಸದಸ್ಯ ಲಿಂಗರಾಜ ಹೂಗಾರ, ಕಾರ್ಯದರ್ಶಿ ಶಿವು ಹಿರೇಮಠ, ನಗರ ಯುವ ಮೋರ್ಚಾದ ಅಧ್ಯಕ್ಷ ಮುತ್ತು ಬರಸಿ, ಮೌನೇಶ ಹೊಸಮನಿ, ಕಾಶಿನಾಥ, ಪದಾಧಿಕಾರಿಗಳಾದ ಜಗದೀಶ, ನಾಗರಾಜ ಕಡಬೂರು, ರಮೇಶ ಮಾಡಸಿರವಾರ, ಫಕೀರಪ್ಪ ತಿಡಿಗೋಳ, ಶ್ರೀನಿವಾಸ ಮೇಸ್ತ್ರಿ, ಸಂಗಪ್ಪ ಬೊಮ್ಮನಾಳ, ಬಸವರಾಜ ಗುಡಿ, ಬೀರಪ್ಪ ಜನತಾ ಕಾಲನಿ ಇದ್ದರು.