ಸಿಂಧನೂರು ತಾಲೂಕಿನ ಕುನ್ನಟಗಿ ಬಳಿಯ ಪಿಕ್‌ಅಪ್ ಡ್ಯಾಂ ಕುಸಿದು ಬಿದ್ದಿರುವ ಸ್ಥಳಕ್ಕೆ ಶಾಸಕ ವೆಂಕಟರಾವ ನಾಡಗೌಡ ಭೇಟಿ ನೀಡಿ, ಪರಿಶೀಲಿಸಿದರು.  
ಜಿಲ್ಲೆ

ಉದ್ಘಾಟನೆಗೂ ಮೊದಲೇ ಕುಸಿದ ಪಿಕ್‌ಅಪ್ ಡ್ಯಾಂ

ಸಿಂಧನೂರು: ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಿಕ್‌ಅಪ್ ಡ್ಯಾಂ ಉದ್ಘಾಟನೆಗೂ ಮೊದಲೇ ಕುಸಿದಿದ್ದು ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದರು.

ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಕುಸಿದು ಬಿದ್ದಿರುವ ಪಿಕ್‌ಅಪ್ ಡ್ಯಾಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಕಾಮಗಾರಿ ಕಳಪೆಯಾಗಿದ್ದರಿಂದ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಅಧಿಕಾರಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಗುತ್ತೇದಾರರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಹಂಪನಗೌಡ ಬಾದರ್ಲಿ ಶಾಸಕರಾಗಿದ್ದಾಗ 60 ಲಕ್ಷ ರೂ. ವೆಚ್ಚದ ಕಾಮಗಾರಿಗೆ 1 ಕೋಟಿ ರೂ. ಬಿಲ್ ಮಾಡಿಕೊಂಡು ಹಣ ಲೂಟಿ ಮಾಡಿದ್ದಾರೆ. ಅವರು ಎಲ್ಲೆಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ ಹಾಗೂ ನಕಲಿ ಬಿಲ್ ಮಾಡಿಕೊಂಡಿರುವ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲಾತಿ ನೀಡುತ್ತೇನೆ ಎಂದು ತಿಳಿಸಿದರು.

ಕುನ್ನಟಗಿ ಪಿಕ್‌ಅಪ್ ಡ್ಯಾಂ ನಿರ್ಮಿಸುವಾಗ ಗ್ರಾಮಸ್ಥರು ದೊಡ್ಡ ಪೈಪ್ ಅಳವಡಿಸಲು ಹೇಳಿದ ಕಾರಣ ದೊಡ್ಡ ಪೈಪ್ ಹಾಕಲಾಗಿತ್ತು. ಇದರಿಂದ ಹೊಡೆದು ಹೋಗಿದೆ. ಕಳಪೆಯಾಗಿದ್ದರೆ ಪರಿಶೀಲನೆ ಮಾಡಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ಪ್ರಮುಖರಾದ ವೆಂಕೋಣ್ಣ ಕಲ್ಲೂರ, ವೀರನಗೌಡ, ಶಿವಪ್ಪ ನಾಯಕ, ಅಮರೇಗೌಡ, ಸುರೇಶ, ಅಮರೇಶ ಪಗಡದಿನ್ನಿ, ವಿಜಯ ರೆಡ್ಡಿ, ನಿರಪಾದಿ, ಪರಸಪ್ಪ, ಗುತ್ತಿಗೆದಾರ ಜಕ್ಕರಾಯ ಇತರರಿದ್ದರು.