ಸಿಂಧನೂರು : ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ಹಿಂದು-ಮುಸ್ಲಿಂರ ಭಾವೈಕ್ಯತೆ ಸಂಕೇತವಾದ ಹಜರತ್ ಮೀರಾಂ ಸೈಯದ್ ಶಾಹ ಶಂಶುದ್ದೀನ್ ಖಾದ್ರಿ ಉರುಸು ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಉರುಸಿನ ಪ್ರಯುಕ್ತ ಧ್ವಜಾರೋಹಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗಿನ ಜಾವ 5 ಗಂಟೆಯಿಂದ ಸೈಯದ್ ಖಾಸೀಂ ಖಾದ್ರಿ ಉರ್ಪ್ ಸರ್ಕಾರ್ ಪಾಷಾ ಸಾಹೇಬ್ ನೇತೃತ್ವದಲ್ಲಿ ಗಂಧ ಮೆರವಣಿಗೆ ನಡೆಯಿತು. ಬಳಿಕ ಧಾರ್ಮಿಕ ವಿಧಾನಗಳ ಪ್ರಕಾರ ಪೂಜಾ-ಪ್ರಾರ್ಥನೆಗಳು ನಡೆದವು. ಗೋಮರ್ಸಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ ಎಲ್ಲ ಜಾತಿ ಜನಾಂಗದ ಜನರು ದರ್ಗಾದಲ್ಲಿ ಸಕ್ಕರೆ ಒದಿಸಿ, ಭಕ್ತಿ ಸಮರ್ಪಿಸಿದರು.
ಪ್ರಮುಖರಾದ ಸೈಯದ್ ಮುಸ್ತಫಾ ಖಾದ್ರಿ, ಸೈಯದ್ ಇಸ್ಮಾಯಿಲ್ ಖಾದ್ರಿ ಅತರ್‌ಬಾಬಾ ಜಾಗೀರ್‌ದಾರ್ ಗೋಮರ್ಸಿ, ಸೈಯದ್ ಅಬ್ದುಲ್ ಖಾದರ್ ಖಾದ್ರಿ ತಾಹೇರ್‌ಬಾಬಾ, ಸೈಯದ್ ಮೈನುದ್ದೀನ್ ಖಾದ್ರಿ ತೆಕ್ಕಲಕೋಟೆ, ಸೈಯದ್ ಷಾ ತಾಹೇರ್‌ಖಾದ್ರಿ ಜಂತಕಲ್, ಸೈಯದ್ ಹಾಜಂಖಾದ್ರಿ ಕಂಪ್ಲಿ, ಸೈಯದ್ ತುರಾಬ್ ಖಾದ್ರಿ ಕಂಪ್ಲಿ, ಸೈಯದ್ ಮತೀನ್ ಖಾದ್ರಿ ಕಂಪ್ಲಿ, ಖಾದರ್ ಬಾಷಾ ತಾತ ಗೋಮರ್ಸಿ, ಸೈಯದ್ ಸಜ್ಜಾದ್ ಖಾದ್ರಿ, ಸೈಯದ್ ಬಾಬಾ ಖಾದ್ರಿ, ಮುಖಂಡರಾದ ಮರೇಗೌಡ, ಬಸನಗೌಡ, ದೊಡ್ಡಬಸನಗೌಡ, ಶ್ರೀನಿವಾಸ, ಖಲೀಲ್‌ಪಾಷಾ, ರಸೂಸ್‌ಸಾಬ್, ಮಹ್ಮದ್, ಬುಡ್ಡಾಸಾಬ್ ಮುಜಾವಾರ್, ಶಾಮೀದ್, ಶಾಹೀದ್ ಇದ್ದರು.