ಜಿಲ್ಲೆ

ಸೌಹಾರ್ದದಿಂದ ಹಬ್ಬ ಆಚರಣೆ ಮಾಡಿ

ಪ್ರವೀಣ ಉದುಸಾ ದಲಬಂಜನ್

ಸಿಂಧನೂರು: ಹಬ್ಬಗಳ ಆಚರಣೆ ಸಂಪ್ರದಾಯ ಬದ್ಧವಾಗಿರಲಿ. ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಸೌಹಾರ್ದದಿಂದ ಆಚರಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಹೇಳಿದರು.

ಗಣೇಶೋತ್ಸವ ಮತ್ತು ಈದ್ ಮಿಲಾದ್ ನಿಮಿತ್ತ ನಗರದ ಟೌನ್‌ಹಾಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ಪರಸ್ಪರರಲ್ಲಿ ಗೌರವ ಭಾವನೆ ಹೊಂದಿರಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ. 24 ಗಂಟೆ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಒಬ್ಬರು ಇರಬೇಕು. ಪರಿಸರಕ್ಕೂ ಹಾನಿಯಾಗುವುದನ್ನು ತಡೆಯಬೇಕು. ನಗರಾದ್ಯಂತ ಸಿಸಿ ಕ್ಯಾಮರಾಗಳಿದ್ದು, ಕಿಡಿಗೇಡಿತನಕ್ಕೆ ಅವಕಾಶ ಇಲ್ಲ ಎಂದರು.

ಡಿವೈಎಸ್ಪಿ ಬಿ.ಎಸ್.ತಳವಾರ ಮಾತನಾಡಿ, ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಎಲ್ಲ ಸಮಾಜದ ಮುಖಂಡರು ಯುವಕರಿಗೆ ತಿಳವಳಿಕೆ ನೀಡಬೇಕು. ಶಾಂತ ರೀತಿಯಿಂದ ಹಬ್ಬ ಆಚರಿಸಬೇಕು ಎಂದರು.

ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಜಮಾಅತೆ ಇಸ್ಮಾಮ್ ಸಮಿತಿ ಅಧ್ಯಕ್ಷ ಹುಸೇನಸಾಬ್ ಮಾತನಾಡಿದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ತಹಸೀಲ್ದಾರ್ ಅರುಣ್ ದೇಸಾಯಿ, ಸಿಪಿಐ ವೀರಾರಡ್ಡಿ, ಪಿಎಸ್‌ಐ ಎರಿಯಪ್ಪ, ಪಿಎಸ್‌ಐ ಸುಜಾತಾ, ಟಿಎಚ್‌ಒ ಡಾ.ಅಯ್ಯನಗೌಡ ಪಾಟೀಲ್, ಜೆಸ್ಕಾಂ ಎಇಇ ಶ್ರೀನಿವಾಸ ಯಾದವ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಸದಸ್ಯ ಕೆ.ರಾಜಶೇಖರ, ನಗರ ಬಿಜೆಪಿ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಡಿ.ನದೀಮ್‌ಮುಲಾ ್ಲಇದ್ದರು.