ಜಿಲ್ಲೆ

ಗಾಂಧೀಜಿ ಆದರ್ಶದೊಂದಿಗೆ ಮುನ್ನಡೆದಿದೆ ಕಾಂಗ್ರೆಸ್

ಸಿಂಧನೂರು: ಭಾರತ್ ಜೋಡೋ ಯಾತ್ರೆ ಐತಿಹಾಸಿಕ ಯಶಸ್ಸು ಕಂಡಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದಲ್ಲಿ ನಗರ ಮತ್ತು ಗ್ರಾಮೀಣ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಭಾರತ್ ಜೋಡೋ ಪಾದಯಾತ್ರೆ ಸಮಾರೋಪ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ಹಾಗೂ ಮಹಾತ್ಮ ಗಾಂಧೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ. ಗಾಂಧೀಜಿ ಆದರ್ಶದೊಂದಿಗೆ ಕಾಂಗ್ರೆಸ್ ಮುನ್ನಡೆದಿದೆ ಎಂದರು.

ನಗರಸಭೆ ಸದಸ್ಯರಾದ ಆಲಂಬಾಷಾ, ಶೇಖರಪ್ಪ ಗಿಣಿವಾರ, ಶರಣಪ್ಪ ಉಪ್ಪಲದೊಡ್ಡಿ, ಪ್ರಮುಖರಾದ ಚಂದ್ರಶೇಖರಗೌಡ ಬಾದರ್ಲಿ, ಬಸಮ್ಮ, ಕನಕಪ್ಪ ನಾಯಕ, ದುರ್ಗಪ್ಪ ಕಟಾಲಿ, ಛತ್ರಪ್ಪ ಕುರುಕುಂದಿ, ಪ್ರಭುರಾಜ, ಮುನೀರ್ ಪಾಷಾ, ಕರೀಂಸಾಬ್, ವೆಂಕಟೇಶ ಬಂಡಿ, ತಿಮ್ಮಯ್ಯ ಭಂಗಿ, ನಾಗರಾಜ ನಾಯಕ, ರಾಮಣ್ಣ ಗೋನ್ವಾರ ಇದ್ದರು.

ಗ್ರಾಮೀಣ ಬ್ಲಾಕ್: ಭಾರತ್ ಜೋಡೋ ಪಾದಯಾತ್ರೆ ಜನರಲ್ಲಿ ಪ್ರೀತಿ ಹಾಗೂ ಏಕತೆಯನ್ನು ಮೂಡಿಸುವುದರೊಂದಿಗೆ ಪಕ್ಷದ ವರ್ಚಸ್ಸು ಹೆಚ್ಚಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೇಳಿದರು. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಐತಿಹಾಸಿಕ ಯಾತ್ರೆಗೆ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆಯುವುದರೊಂದಿಗೆ ರಾಜಕೀಯದಲ್ಲಿ ಮಹತ್ವಪೂರ್ಣ ಬದಲಾವಣೆ ತಂದಿದೆ ಎಂದರು.

ಭಾರತ್ ಜೋಡೋ ಯಾತ್ರೆ ಮುಕ್ತಾಯ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ ಕಾಂಗ್ರೆಸ್ ಗ್ರಾಮೀಣ ಬ್ಲಾಕ್‌ನಿಂದ ಆಯೋಜಿಸಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಶಿವಕುಮಾರ ಜವಳಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಧ್ಯಕ್ಷ ಸಮೀರ್ ಸಾಜಿದ್, ಖಾಜಾ ರೌಡಕುಂದ, ವಿವಿಧ ಘಟಕದ ಪದಾಧಿಕಾರಿಗಳು ಇದ್ದರು.