ಜಿಲ್ಲೆ

8 ವರ್ಷಗಳ ಸಾಧನೆ ಮನೆಗೆ ತಲುಪಿಸುವ ಕೆಲಸ; ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿಕೆ

ಸಿಂಧನೂರು: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ಸೆ.17 ರಿಂದ ಅ.2 ರವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮೀಣ, ನಗರ ಮಂಡಲ ಹಾಗೂ ವಿವಿಧ ಮೋರ್ಚಾಗಳ ಮೂಲಕ ಆರೋಗ್ಯ, ರಕ್ತದಾನ ಶಿಬಿರ, ಅಂಗವಿಕಲರಿಗೆ ಕೃತಕ ಅಂಗಾಂಗ ಜೋಡಣೆ, ನದಿ, ಕೆರೆ, ಬಾವಿಗಳ ಸ್ವಚ್ಛತಾ ಅಭಿಯಾನ, ಸಸಿಗಳನ್ನು ನೆಡುವುದು. ಕೋವಿಡ್ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ, ನರೇಂದ್ರ ಮೋದಿ, ಜನಸಂಘದ ಸಂಸ್ಥಾಪಕ ಪಂ.ದೀನದಯಾಳ ಉಪಾಧ್ಯಯ ಕುರಿತು ಚರ್ಚೆ, ಸಂವಾದ ಆಯೋಜಿಸಲಾಗುತ್ತಿದೆ. ಸರ್ಕಾರದ 8 ವರ್ಷಗಳ ಸಾಧನೆ ಮನೆ-ಮನೆಗೆ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ, ಗ್ರಾಮೀಣ ಮಂಡಲ ಅಧ್ಯಕ್ಷ ಟಿ.ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷ ನಿರುಪಾದೆಪ್ಪ ಜೋಳದರಾಶಿ, ಪ್ರಮುಖರಾದ ಪರಮೇಶ್ವರಪ್ಪ, ಶಿವಬಸನಗೌಡ ಗೊರೇಬಾಳ, ಹನುಮಂತರೆಡ್ಡಿ ಹುಡಾ, ರಾಮನಗೌಡ ಹಾರಾಪುರ, ಮಂಜುನಾಥ ಅರಸೂರು, ರವಿ ರಾಥೋಡ್, ಮೌನೇಶ ಇತರರಿದ್ದರು.