ಸಿಂಧನೂರಿನಲ್ಲಿ ದಸರಾ ಉತ್ಸವ ಅಂಗವಾಗಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟಕ್ಕೆ ಮಾಜಿ ಸಚಿವ ವೆಂಕಟರಾವ ನಾಡಗೌಡ ಚಾಲನೆ ನೀಡಿದರು. ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ತಹಸೀಲ್ದಾರ್ ಅರುಣ್ ದೇಸಾಯಿ, ಕ್ರೀಡಾ ಉಸ್ತವಾರಿಗಳಾದ ಡಾ.ವೆಂಕಟರಾವ್, ಎಸ್.ದೇವೇಂದ್ರಗೌಡ, ಮಂಜುಳಾ ಪಾಟೀಲ್, ಶ್ರೀದೇವಿ ಶ್ರೀನಿವಾಸ, ಸಹನಾ ಹಿರೇಮಠ, ತಾಪಂ ಇಒ ಚಂದ್ರಶೇಖರ, ಬಸವರಾಜ ಹಿರೇಗೌಡ, ಶಿವು ಇದ್ದರು. 
ಜಿಲ್ಲೆ

ಕ್ರೀಡೆಗಳನ್ನು ಪಾಲ್ಗೊಳ್ಳುವುದರಿಂದ ಅನುಕೂಲ

ಸಿಂಧನೂರು: ಮಹಿಳೆಯರು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕಿದ್ದು, ಇದರಿಂದ ಅನುಕೂಲವಿದೆ. ದಸರಾ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಕ್ರೀಡಾಕೂಟ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಹೇಳಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಮೈದಾನದಲ್ಲಿ ದಸರಾ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಕಬಡ್ಡಿ, ಖೋಖೊ, ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಕ್ರೀಡಾಕೂಟದಲ್ಲಿ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ವರ್ಷಕ್ಕೊಮ್ಮೆ ಉತ್ಸವದ ಹೆಸರಿನಲ್ಲಿ ಮಹಿಳೆಯರು ಕ್ರೀಡಾಕೂಟ ಹಾಗೂ ಮನರಂಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದರು.