ಸಿಂಧನೂರು ತಾಪಂ ಕಚೇರಿ ವ್ಯವಸ್ಥಾಪಕಿ ಸರಳಾಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುರುಕುಂದಾ ಗ್ರಾಮ ಘಟಕದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು. 
ಜಿಲ್ಲೆ

ನರೇಗಾ ಮೇಟಿಗಳಿಗೆ ಪ್ರೋತ್ಸಾಹಧನ ನೀಡಿ

ಸಿಂಧನೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಮೇಟಿಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಾಪಂ ಕಚೇರಿ ವ್ಯವಸ್ಥಾಪಕಿ ಸರಳಾಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುರುಕುಂದಾ ಗ್ರಾಮ ಘಟಕದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಮೇಟಿಗಳು ಗ್ರಾಪಂನಲ್ಲಿ ಗುಂಪುಗಳನ್ನು ರಚಿಸಿಕೊಂಡು ನರೇಗಾ ಯೋಜನೆಯಡಿ ಕಾಮಗಾರಿ ಅನುಷ್ಠಾನ ಮಾಡುತ್ತಿದ್ದಾರೆ. ಪುರುಷ ಮೇಟಿಗೆ 4ರೂ., ಮಹಿಳಾ ಮೇಟಿಗೆ 5ರೂ. ನಿಗದಿ ಮಾಡಲಾಗಿದೆ. 2020-21ನೇ ಸಾಲಿನ ಪ್ರೋತ್ಸಾಹ ಧನ ಈವರೆಗೂ ಬಿಡುಗಡೆ ಆಗಿಲ್ಲ. ಈ ಕುರಿತು ಸಂಬಂಧಿಸಿದ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ದೂರಿದರು.

ಕಳೆದ ಐದಾದು ತಿಂಗಳಿಂದ ನರೇಗಾ ಯೋಜನೆಯಡಿ ಗ್ರಾಪಂನಿಂದ ಕೆಲಸ ನೀಡಿಲ್ಲ. ಈ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಮೇಟಿಗಳಿಗೆ ಪ್ರೋತ್ಸಾಹ ಧನ ನೀಡಬೇಕು. ನರೇಗಾ ಯೋಜನೆಯಡಿ ಕೆಲಸ ನೀಡಬೇಕೆಂದು ಒತ್ತಾಯಿಸಿದರು. ಗ್ರಾಮ ಘಟಕ ಅಧ್ಯಕ್ಷ ನಿಂಗಪ್ಪ ಕುರುಕುಂದಾ, ಕಾರ್ಯದರ್ಶಿ ವೀರೇಶ, ಉಪಾಧ್ಯಕ್ಷೆ ಅಂಬಮ್ಮ, ಖಜಾಂಚಿ ಶರಣಪ್ಪ, ಸದಸ್ಯರಾದ ಸೋಮಲಿಂಗಪ್ಪ, ನಾಗಪ್ಪ, ಶಿವಬಸಮ್ಮ, ರಾಮಣ್ಣ, ಮಲ್ಲಮ್ಮ, ಬಸಮ್ಮ, ಗುಡದಪ್ಪ ಇದ್ದರು.