ಜಿಲ್ಲೆ

ಧರಣಿ ವಾಪಾಸ್ ಪಡೆದ ಬಿಸಿಯೂಟ ನೌಕರರು

ಸಿಂಧನೂರು: ಸರ್ಕಾರ ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಇಡುಗಂಟು ನೀಡಲು ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಹಿಂಪಡೆಯಲಾಗಿದೆ ಎಂದು ಬಿಸಿಯೂಟ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶೇಕ್ಷಾಖಾದ್ರಿ ತಿಳಿಸಿದ್ದಾರೆ.

ಧರಣಿ ಸ್ಥಳಕ್ಕೆ ಶಿಕ್ಷಣ ಮತ್ತು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಲಿಖಿತ ಪತ್ರದಲ್ಲಿ ಒಪ್ಪಿಗೆ ನೀಡಿದ್ದಾರೆ. ನೇಮಕಗೊಂಡು 60 ವರ್ಷ ಪೂರೈಸಿ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡುಗಂಟು ಸೌಲಭ್ಯವನ್ನು ಈಗಾಗಲೇ ನಿವೃತ್ತಿ ಹೊಂದಿದ 11,000 ಸಿಬ್ಬಂದಿಗೆ ಹಾಗೂ ಮುಂದೆ ನಿವೃತ್ತಿ ಹೊಂದುವ ಸಿಬ್ಬಂದಿಗೆ ವಿಸ್ತರಿಸಲು ಸಹಮತಿಸಿದೆ. 15 ವಷರ್ ಹಾಗೂ ಅದಕ್ಕೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ಸಿಬ್ಬಂದಿಗೆ 40 ಸಾವಿರ ರೂ. ಇಡುಗಂಟು, 5 ವಷರ್ಕ್ಕೂ ಮೇಲ್ಪಟ್ಟು ಹಾಗೂ 15 ವಷರ್ಕ್ಕಿಂತ ಕಡಿಮೆ ಸೇವೆ ಸಲ್ಲಿಸಿ 60 ವಷರ್ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ಸಿಬ್ಬಂದಿಗೆ 30 ಸಾವಿರ ರೂ. ಇಡುಗಂಟು ಹಾಗೂ ಕನಿಷ್ಠ 5 ವರ್ಷ ಸೇವೆಯನ್ನು ಪೂರ್ಣಗೊಳಿಸದ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡುಗಂಟು ಸೌಲಭ್ಯ ಲಭ್ಯವಿರುವುದಿಲ್ಲವೆಂದು ಕಾರ್ಯದರ್ಶಿ ತಿಳಿಸಿದ್ದಾರೆ. ಹೀಗಾಗಿ ಹೋರಾಟವನ್ನು ವಾಪಸ್ ಪಡೆದುಕೊಂಡು ಗುರುವಾರದಿಂದ ರಾಜ್ಯದ ಎಲ್ಲ ಅಡುಗೆ ಸಿಬ್ಬಂದಿ ಶಾಲೆಗಳಿಗೆ ಹಾಜರಾಗಿ ಕೆಲಸ ನಿರ್ವಹಿಸುತ್ತಿದ್ದಾರೆೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.