ಸಿಂಧನೂರು: ಛತ್ತೀಸ್‌ಗಡದಲ್ಲಿ ಕ್ಯಾಥೋಲಿಕ್ ಮಹಿಳೆಯರನ್ನು ಕಾನೂನು ಬಾಹಿರವಾಗಿ ಬಂಧಿಸಿರುವುದು ಹಾಗೂ ಮುಗ್ಧ ಜನರ ಮೇಲೆ ದೌರ್ಜನ್ಯ ಖಂಡಿಸಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬಳ್ಳಾರಿ ಧರ್ಮಕೆ ್ಷೀತ್ರದ ಸಿಂಧನೂರು ವಲಯದ ಕ್ರಿಶ್ಚಿಯನ್ ಸಮುದಾಯದವರು ಹಾಗೂ ಯುಸಿಎಫ್ ಪದಾಧಿಕಾರಿಗಳು ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ಅಲ್ಪಸಂಖ್ಯಾತ ಕ್ರೈಸ್ತರು, ಶಾಂತಿಪ್ರಿಯರು. ಸಹೋದರತೆಯಿಂದ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸಮುದಾಯದವರ ಮೇಲೆ ಮತ್ತು ಚರ್ಚ್‌ಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅದರಲ್ಲೂ ಛತ್ತೀಸ್‌ಗಡದಲ್ಲಿ ಕಾನೂನುಬಾಹಿರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಂಧನೂರಿನ ಪವಿತ್ರ ಕುಟುಂಬ ದೇವಾಲಯದ ಮುಖ್ಯಗುರು ಜ್ಞಾನ ಪ್ರಕಾಶಂ, ದಲಿತಪರ ಹೋರಾಟಗಾರ ಎಚ್.ಎನ್.ಬಡಿಗೇರ್, ಆರ್.ಸಿ.ಎಫ್.ರಾಜ್ಯ ಸಮಿತಿ ಮುಖಂಡರಾದ ಎಂ.ಗಂಗಾಧರ, ಅಂಬ್ರೂಸ್, ಚಿನ್ನಪ್ಪ ಹೆಡಗಿಬಾಳ, ಕರ್ನಾಟಕ ರಕ್ಷಣಾ ವೇದಿಕೆಯ ದಾವಲಸಾಬ ದೊಡ್ಡಮನಿ, ಡಿಶ್ ಗಂಗಣ್ಣ, ರಾಜು ಬಾಬು, ಬಾಲಸ್ವಾ ಮಿ ವಕೀಲ, ವಲಯ ಪಾಲನಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.