ಜಿಲ್ಲೆ

ಅಂಬೇಡ್ಕರ್ ವಿಚಾರಧಾರೆ ಸಮಾಜಕ್ಕೆ ದಾರಿದೀಪ

ಸಿಂಧನೂರು: ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಸಮಾಜಕ್ಕೆ ದಾರಿದೀಪವಾಗಿದ್ದು, ಅವರು ರಚಿಸಿದ ಸಂವಿಧಾನದಿಂದ ಎಲ್ಲರ ಬದುಕು ಹಸನಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಐ ದುರುಗಪ್ಪ ಹೇಳಿದರು.

ನಗರದ ಕುಷ್ಟಗಿ ರಸ್ತೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಜೈ ಭೀಮ್ ಘರ್ಜನೆ ಸಂಘದಿಂದ ಆಯೋಜಿಸಿದ್ದ ನಮ್ಮ ನಡೆ ಸಂವಿಧಾನದ ಅರಿವಿನ ಕಡೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಅಂಬೇಡ್ಕರ್ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಶೋಷಿತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ಅನುಕೂಲವಾಗಿದೆ. ನಾವೆಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಿದೆ ಎಂದರು.

ಜೈ ಭೀಮ್ ಘರ್ಜನೆ ಸಂಘಟನೆಯ ಸಂಸ್ಥಾಪಕ ನಿರುಪಾದಿ, ಪ್ರಮುಖರಾದ ಶಫೀವುಲ್ಲಾ, ನಾಗರಾಜ ಬೊಮ್ಮನಾಳ, ರಾಮಣ್ಣ ಹಿರೇಬೇರ‌್ಗಿ, ವಿಜಯಲಕ್ಷ್ಮೀ, ಸಿದ್ದಪ್ಪ ಸೋಮಲಾಪುರ ಇತರರು ಇದ್ದರು.