ಸಿಂಧನೂರಿನ ಶುಕ್ರವಾರ ಹಮ್ಮಿಕೊಂಡ ಪುಟ್ಟರಾಜ ಗವಾಯಿಗಳ 14ನೇ ಪುಣ್ಯಸ್ಮರಣೆ ಹಾಗೂ ಸಂಗೀತ ಕಾರ್ಯಕ್ರಮವನ್ನು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತ ತಾಲೂಕು ಘಟಕ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಸಮಿತಿಯ ಅಧ್ಯಕ್ಷ ಬಸವರಾಜ ಮೋತಿ, ಪ್ರಮುಖರಾದ ಪುಟ್ಟರಾಜ ಮೋತಿ, ಮಂಜುನಾಥ ನಾರಾಯಣಪುರ ಇದ್ದರು. 
ಜಿಲ್ಲೆ

ಸಂಗೀತಕ್ಕೆ ಗವಾಯಿಗಳ ಕೊಡುಗೆ ಅಪಾರ

ಸಿಂಧನೂರು: ಸಂಗೀತ ಒಂದು ಕಠಿಣ ತಪಸ್ಸು. ಅದರಲ್ಲಿ ಆದಮ್ಯ ಶಕ್ತಿ ಅಡಗಿದೆ. ಅದು ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ. ಸಂಗೀತ ಸಾಧಕರಾಗಲು ತ್ರಿಕರಣ ಶುದ್ಧಿ ಹಾಗೂ ಗುರುವಿನ ಕೃಪೆ ಅಗತ್ಯ ಎಂದು ಮೂರುಮೈಲ್‌ಕ್ಯಾಂಪ್ ಕರಿಬಸವನಗರ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಸುಕಾಪೇಟೆಯಲ್ಲಿರುವ ಶ್ರೀಗುರು ಪಂಚಾಕ್ಷರಿ ಸಂಗೀತ ಸಲಕರಣೆ ಕೇಂದ್ರದ ಆವರಣದಲ್ಲಿ ಶುಕ್ರವಾರ ಶ್ರೀಗುರು ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಶ್ರೀಗುರು ಪಂಡಿತ ಪುಟ್ಟರಾಜ ಗವಾಯಿಗಳ 14ನೇ ಪುಣ್ಯಸ್ಮರಣೆ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವರ ಹಾಗೂ ಲಯಗಳನ್ನು ಯಾವ ಗುರುವಿನಿಂದಲೂ ಕಲಿಯಲು ಅಸಾಧ್ಯ. ಇದು ದೈವದತ್ತವಾಗಿ ಬರುವಂಥದ್ದಾಗಿದೆ. ಭಾರತೀಯ ಸಂಗೀತ ಪರಂಪರೆಗೆ ಗದುಗಿನ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದೆ. ಸಾವಿರಾರು ಅಂಧರ ಬಾಳಿಗೆ ಗವಾಯಿಗಳು ಬೆಳಕಾಗಿದ್ದಾರೆ ಎಂದರು.ಶರಣಯ್ಯಸ್ವಾಮಿ ಬೇವಿನಾಳ ಸಾನ್ನಿಧ್ಯ ವಹಿಸಿದ್ದರು. ಸಂಗೀತ ಕಲಾವಿದರಾದ ಪುಟ್ಟರಾಜ ಮೋತಿ, ಮಂಜುನಾಥ ನಾರಾಯಣಪುರ, ಮಲ್ಲಿನಾಥ ತಬಲ, ಜಾನಪದ ಕಲಾವಿದ ಹನುಮಂತರಾಯ, ಪ್ರಮುಖರಾದ ಗೌಡಪ್ಪಗೌಡ ಯಾಪಲಪರ್ವಿ, ಸರೋಜಮ್ಮ ಹಿರೇಮಠ, ವೆಂಕಟೇಶ ಬಾದರ್ಲಿ ಇದ್ದರು.