ಜಿಲ್ಲೆ

ಭಾರತಕ್ಕೆ ಕರೆತರಲು ವ್ಯವಸ್ಥೆ; ತಹಸೀಲ್ದಾರ್ ಮಂಜುನಾಥ ಭೋಗಾವತಿ ಹೇಳಿಕೆ

ಸಿಂಧನೂರು: ಯುದ್ಧಪೀಡಿತ ಯೂಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ತಾಲೂಕಿನ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕ್ರಮವಹಿಸಿದೆ. ಪಾಲಕರು ಆತಂಕಪಡುವ ಅಗತ್ಯವಿಲ್ಲ ಎಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದರು.

ಯೂಕ್ರೇನ್‌ಗೆ ವಿದ್ಯಾಭ್ಯಾಸಕ್ಕೆ ತೆರಳಿರುವ ನಂದೀಶ ಬಾದರ್ಲಿ, ತೃಪ್ತಿ ಪೂಜಾರಿ, ಶಶಾಂಕ ಸುಕಾಲಪೇಟೆ, ಗುಡದಪ್ಪ ಕುರುಕುಂದ, ಸೋಮು ತುರ್ವಿಹಾಳ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ತಹಸೀಲ್ದಾರ್, ನಿಮ್ಮ ಮಕ್ಕಳನ್ನು ಕರೆ ತರುವುದು ನಮ್ಮ ಜವಬ್ದಾರಿಯಾಗಿದೆ. ಸುರಕ್ಷಿತವಾಗಿ ಕರೆದುಕೊಂಡು ಬರಲು ಸರ್ಕಾರ ಹಾಗೂ ಜಿಲ್ಲಾಡಳಿತ ವಿಶೇಷ ಕ್ರಮವಹಿಸಿದೆ. ಯಾವುದೇ ಆತಂಕ ಬೇಡ. ಶೀಘ್ರವೇ ನಿಮ್ಮ ಮಕ್ಕಳು ಮನೆ ಸೇರಲಿದ್ದಾರೆಂದು ಭರವಸೆ ನೀಡಿದರು.