ಜಿಲ್ಲೆ

ಸಾಮೂಹಿಕ ವಿವಾಹ ಮುಂದಕ್ಕೆ

Raichur

2022ರ ಮಾ.28ರಂದು ನಿಗದಿ | ಡಿ.26ರಂದು ನಡೆಯಬೇಕಿದ್ದ ಕಾರ್ಯಕ್ರಮ

ಸಿಂಧನೂರು: ಕನಕದಾಸ ಜಯಂತಿ ಅಂಗವಾಗಿ ತಾಲೂಕು ಕುರುಬ ಸಮುದಾಯ ಡಿ.26 ರಂದು ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 2022ರ ಮಾ.28ಕ್ಕೆ ಮುಂದೂಡಲಾಗಿದೆ ಉಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗ ರೈತರು ಭತ್ತ ಕಟಾವು, ನಂತರ ನಾಟಿಯಲ್ಲಿ ತೊಡಗಿಕೊಳ್ಳುತ್ತಾರೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಅವರಿಗೆ ತೊಂದರೆಯಾಗಲಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಮದುವೆ ಮಾಡಿಕೊಳ್ಳಲು ಇಚ್ಛಿಸುವರಿಗೆ ಇನ್ನೂ ಹೆಚ್ಚಿನ ಸಮಯಾವಕಾಶ ಸಿಗಲಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಣಿ ಮಾಡಬಹುದು ಎಂದರು.

ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ನ.29 ರಂದು ಬೆಳಗ್ಗೆ 11 ಗಂಟೆಗ ಹಿಂದುಳಿದ ವರ್ಗಗಳ ಸಭೆ ನಡೆಯಲಿದ್ದು ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಎಂಎಲ್‌ಸಿ ನರೇಂದ್ರಬಾಬು ಪಾಲ್ಗೊಳ್ಳಲಿದ್ದಾರೆ. ಹಿಂದುಳಿದ ವರ್ಗಗಳ ಸಂಘಟನೆಗೆ ಸಂಬಂಧಿಸಿದಂತೆ ವಿವಿಧ ಚರ್ಚೆಗಳು ನಡೆಯಲಿವೆ ಎಂದರು.

ಕನಕಗುರುಪೀಠದ ನಂಜುಂಡಯ್ಯ ಗುರುವಿನ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಾಲೂಕು ಕುರುಬ ಸಂಘದ ಅಧ್ಯಕ್ಷ ಪೂಜಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಶಂಬಣ್ಣ ಸುಕಾಲಪೇಟೆ, ವೆಂಕಟೇಶ ಬಾದರ್ಲಿ, ಬಸವರಾಜ ಗೊರೇಬಾಳ ಇದ್ದರು.