ಜಿಲ್ಲೆ

ಪ್ರತಾಪಗೌಡ ಪರ ನಾಯ್ಡು ಪ್ರಚಾರ

ಸಿಂಧನೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಎಲ್ಲ ವರ್ಗದವರ ಏಳಿಗೆಗೆ ಶ್ರಮಿಸುತ್ತಿದೆ. ಇಂಥ ಸರ್ಕಾರ ರಚನೆಗೆ ಪ್ರತಾಪಗೌಡರು ಮಹತ್ವದ ಕೊಡುಗೆ ನೀಡಿದ್ದಾರೆ. ಅವರನ್ನು ಬೆಂಬಲಿಸಿ, ಗೆಲ್ಲಿಸಬೇಕೆಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನವಿ ಮಾಡಿದರು.

ತಾಲೂಕಿನ ಜೋಳದರಾಶಿಕ್ಯಾಂಪ್, ನಾರಾಯಣನಗರಕ್ಯಾಂಪ್, ಹಾರಾಪುರಕ್ಯಾಂಪ್ ಸೇರಿ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಭಾನುವಾರ ಪ್ರಚಾರ ನಡೆಸಿದರು. ಪ್ರಮುಖರಾದ ಎನ್.ಶಂಕ್ರಪ್ಪ, ಮಸ್ಕಿ ಕ್ಷೇತ್ರದ ರೈತಮೋರ್ಚಾ ಅಧ್ಯಕ್ಷ ಜಿ.ವೆಂಕಟೇಶ್ವರಾವ್, ಪಿ.ಕೃಷ್ಣ, ರೈತಮೋರ್ಚಾ ಅಧ್ಯಕ್ಷ ಗನ್ನಿ ವೀರರಾಜು, ಮಲ್ಲಿಕಾರ್ಜುನ ಭೀಮರಾಜಕ್ಯಾಂಪ್, ದೊರೆಬಾಬು ಇದ್ದರು.