ಜಿಲ್ಲೆ

49,644 ಜನರಿಂದ ಕಾಂಗ್ರೆಸ್ ಸದಸ್ಯತ್ವ - ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೇಳಿಕೆ

ಸಿಂಧನೂರು: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 49,644 ಜನರನ್ನು ಡಿಜಿಟಲ್ ಸದಸ್ಯತ್ವ ಅಭಿಯಾನದಡಿ ಕಾಂಗ್ರೆಸ್ ಸದಸ್ಯರನ್ನಾಗಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೇಳಿದರು.

ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮೂರು ತಿಂಗಳಿಂದ ಡಿಜಿಟಲ್ ಸದಸ್ಯತ್ವ ಅಭಿಯಾನ ನಡೆಸಲಾಗಿದೆ. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 49,644 ಜನರು ಸದಸ್ಯತ್ವ ಪಡೆದಿದ್ದು, ನಮ್ಮ ತಂಡ 41,152 ಜನರಿಗೆ ಸದಸ್ಯತ್ವ ನೀಡಿದೆ. ಜಿಲ್ಲೆಯಲ್ಲಿ ಸಿಂಧನೂರು ಪ್ರಥಮ ಸ್ಥಾನದಲ್ಲಿದೆ ಎಂದರು.

ನಾನು ಯಾರ ಬಳಿಯೂ ಹೋಗಿ ನನ್ನನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಾಡಿ ಅಂತ ಬೇಡಿಕೊಂಡಿಲ್ಲ. ಪಕ್ಷದ ಬಲವರ್ಧನೆಗಾಗಿ ನಿಷ್ಠೆಯಿಂದ ದುಡಿದ ಕಾರಣ ಸ್ಥಾನ ನೀಡಿದ್ದಾರೆ. ಕೆ.ಎಸ್.ಈಶ್ವರಪ್ಪರನ್ನು ಬಂಧಿಸುವಂತೆ ಒತ್ತಾಯಿಸಿ ಏ.20 ರಂದು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಂದು ರಾಯಚೂರಿಗೆ ಆಗಮಿಸಲಿದ್ದಾರೆ ಎಂದು ಬಸನಗೌಡ ಬಾದರ್ಲಿ ತಿಳಿಸಿದರು.

ಪ್ರಮುಖರಾದ ಎಚ್.ಎನ್.ಬಡಿಗೇರ್, ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಶರಣಯ್ಯಸ್ವಾಮಿ ಕೋಟೆ, ಯೂನೂಸ್ ಪಾಷಾ, ಚನ್ನಬಸವರಾಜ ಕುಂಬಾರ ಅಲಬನೂರು, ಖಾಜಾಹುಸೇನ್ ರೌಡಕುಂದಾ, ಹಬೀಬ್ ಖಾಜಿ, ವೀರರಾಜು, ದುರುಗೇಶ ಬಾಲಿ, ಮಲ್ಲಯ್ಯ, ರಾಜಾಹುಸೇನ್, ನೂರ್ ಮಹ್ಮದ್ ಇದ್ದರು.