ಸಿಂಧನೂರಿನ ಉಪ್ಪಾರವಾಡಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ತಾಲೂಕುಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ರಮಾದೇವಿ ಶಂಭೋಜಿ, ಕೆ.ಚಂದ್ರಕಲಾ, ರೂಪಾಲಿ ಆನಂದ, ಕಾರ್ಯದರ್ಶಿ ಬೀರಪ್ಪ ಶಂಭೋಜಿ, ನಿರ್ಣಾಯಕ ಅಮರೇಶ ಹೂಗಾರ ಇದ್ದರು. 
ಜಿಲ್ಲೆ

ಮಕ್ಕಳಲ್ಲಿ ಸಹನೆ ಮೂಡಿಸಲಿದೆ ಸ್ಕೌಟ್ಸ್-ಗೈಡ್ಸ್

ಸಿಂಧನೂರು: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಮೂಲಕ ಭವಿಷ್ಯ ರೂಪಿಸಬೇಕೆಂದು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್ ಹೇಳಿದರು.

ನಗರದ ಉಪ್ಪಾರವಾಡಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ತಾಲೂಕುಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಬಹುಮಾನ ವಿತರಣೆ ಮಾತನಾಡಿ, ಭಾರತ್ ಸ್ಕೌಟ್ಸ್-ಗೈಡ್ಸ್ ಮಕ್ಕಳಲ್ಲಿ ಸಹನೆ, ತಾಳ್ಮೆ, ತ್ಯಾಗ ಹಾಗೂ ಸಾಮರಸ್ಯ ಬದುಕಿನ ಬಗ್ಗೆ ತಿಳುವಳಿಕೆ ನೀಡುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್.ಶರಣೇಗೌಡ ಮಾತನಾಡಿ, ತಾಲೂಕಿನಲ್ಲಿ ಸ್ಕೌಟ್ ಗೈಡ್ಸ್ ತರಬೇತಿ ಹೊಂದಿದ ಶಿಕ್ಷಕರ ಸಂಖ್ಯೆ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಸ್ಕೌಟಿಂಗ್, ಗೈಡಿಂಗ್ ಮಹತ್ವ ತಿಳಿಸಿ ಅವರಲ್ಲಿ ನೈತಿಕ ಮೌಲ್ಯ, ದೇಶಾಭಿಮಾನ ಹೆಚ್ಚಿಸಬೇಕೆಂದು ತಿಳಿಸಿದರು.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಂಡಗಳು: ದುಗ್ಗಮ್ಮನಗುಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿಕ್ಕಯ ಪಂಡಿತ ಕಬ್ ಮತ್ತು ಬುಲ್ ಬುಲ್ ತಂಡದ ವಿದ್ಯಾರ್ಥಿಗಳು, ವಿರುಪಾಪುರ ಸರ್ಕಾರಿ ಪ್ರೌಢಶಾಲೆಯ ಸಾವಿತ್ರಿಬಾಯಿ ಫುಲೆ ಗೈಡ್ ಘಟಕ ತಂಡದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಗೆ ಆಯ್ಕೆಯಾದರು.

ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ರಮಾದೇವಿ ಶಂಭೋಜಿ, ಕೆ.ಚಂದ್ರಕಲಾ, ರೂಪಾಲಿ ಆನಂದ ಮಾತನಾಡಿದರು. ಕಾರ್ಯದರ್ಶಿ ಬೀರಪ್ಪ ಶಂಭೋಜಿ, ನಿರ್ಣಾಯಕ ಅಮರೇಶ ಹೂಗಾರ, ಜಿಲ್ಲಾ ಎಸ್.ಜಿ.ವಿ. ಶರ್ಫುದ್ದೀನ್, ಕಬ್ ಮಾಸ್ಟರ್ ಶಂಕರ ದೇವರು ಹಿರೇಮಠ, ಗೈಡ್ ಕ್ಯಾಪ್ಟನ್ ಉಮಾದೇವಿ. ಡಿ., ಬಸಮ್ಮ ಹಿರೇಮಠ ಕವಿತಾ ಹೊಳಿಯಪ್ಪ, ಸ್ಕೌಟ್ ಮಾಸ್ಟರ್ಸ್‌ ಸಿದ್ದಪ್ಪ, ಬೀರಪ್ಪ ಇದ್ದರು.