ಜಿಲ್ಲೆ

ವಿದ್ಯಾರ್ಥಿಗಳ ಉತ್ತಮ ಅಭ್ಯಾಸಕ್ಕೆ ಸಹಕಾರಿ

ಸಿಂಧನೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಕೋನದಿಂದ ಸಂಸ್ಥೆಯಿಂದ ಬ್ಯಾಟರಿ ವಿತರಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯೂತ್ ಫಾರ್ ಸೇವಾ ಟ್ರಸ್ಟ್ ಜಿಲ್ಲಾ ಮುಖ್ಯಸ್ಥ ಡಿ.ಶಿವಂ ಹೇಳಿದರು.

ತಾಲೂಕಿನ ರೌಡಕುಂದ ಸಿಆರ್‌ಸಿಯ ಬಂಗಾರಿ ಕ್ಯಾಂಪ್ ಶಾಲೆಯಲ್ಲಿ ಯೂತ್ ಫಾರ್ ಸೇವಾ ಟ್ರಸ್ಟ್ ವತಿಯಿಂದ ಯುಪಿಎಸ್ ಬ್ಯಾಟರಿ ಮಂಗಳವಾರ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿದರೆ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ಹೆಚ್ಚುತ್ತದೆ. ಪ್ರತಿ ದಿನ 10 ರಿಂದ 12 ಗಂಟೆ ನಿರಂತರ ಅಭ್ಯಾಸದಿಂದ ಮಾತ್ರ ಉನ್ನತ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ. ಮುಂದೆ ಗುರಿ ಹಿಂದೆ ಗುರು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.

ಮುಖ್ಯಶಿಕ್ಷಕಿ ಶಿವಗಂಗಮ್ಮ ಮಾತನಾಡಿ,ಶಾಲೆಯಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.ಅವರ ಅಭ್ಯಾಸಕ್ಕೆ ಯುಪಿಎಸ್ ಬ್ಯಾಟರಿ ತುಂಬಾ ಅವಶ್ಯಕ ಇದೆ. ಸರ್ಕಾರಿ ಶಾಲೆಯನ್ನು ಗುರುತಿಸುವ ಯುಪಿಎಸ್ ಬ್ಯಾಟರಿಸುವ ವಿತರಿಸಿದ ಸಂಸ್ಥೆಯವರು ಕಾರ್ಯ ಶ್ಲಾಘನೀಯವಾದದ್ದು ಎಂದರು.

ಶಿಕ್ಷಕ ಪ್ರಭಾಕರ ಕುಲಕರ್ಣಿ ಮಾತನಾಡಿದರು. ಶಿಕ್ಷಕ ಬಸವರಾಜ ಮೆಣಸಿನಕಾಯಿ, ಸಿಆರ್‌ಪಿ ರವಿಕುಮಾರ ಬಡಿಗೇರ, ರೌಡಕುಂದ ಶಾಲೆಯ ಮುಖ್ಯಶಿಕ್ಷಕ ಶೇಷಗಿರಿ ಆಚಾರ್ಯ,ಲಕ್ಷ್ಮೀಕ್ಯಾಂಪ್ ಶಾಲೆಯ ಮುಖ್ಯಶಿಕ್ಷಕ ಭಾರತಿ, ರೌಡಕುಂದ ಉರ್ದು ಶಾಲೆಯ ಮುಖ್ಯಶಿಕ್ಷಕ ನೂರಿ ಅಂಜುಮ್, ರಾಮಕ್ಯಾಂಪ್ ಶಾಲೆಯ ಶಿಕ್ಷಕ ಗಣೇಶ್ ಇತರರಿದ್ದರು.