ಸಿಂದಗಿ: ಪಟ್ಟಣದ ತೊಂಟದ ಡಾ. ಸಿದ್ಧಲಿಂಗ ಸ್ವಾಮಿಗಳ ರಸ್ತೆ ಸೇರಿ ವ್ಯಾಪಾರು ವಹಿವಾಟುಗಳ ರಸ್ತೆ, ಪ್ರಮುಖ ಬೀದಿ ಹಾಗೂ ಸ್ಲಂಗಳಲ್ಲಿ ಕರೊನಾ ರೋಗ ಭೀತಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮಂಗಳವಾರ ಮಧ್ಯಾಹ್ನ ಹೈಡ್ರೋಕ್ಲೊರೈಡ್ ಔಷಧಿ ಸಿಂಪಡಿಸಿದರು.
ತುರ್ತು ಕೆಲಸಗಳಿಗಾಗಿ ಜನರು ಸಂಚಾರ ಮಾಡುತ್ತಿದ್ದು, ಅವರ ಆರೋಗ್ಯ ಹಾಗೂ ಬೀದಿ ವ್ಯಾಪಾರಿಗಳ ಹಿತದೃಷ್ಠಿಯಿಂದ ಈ ಕ್ರಮ ಜರುಗಿಸಲಾಗಿದೆ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ರಮೇಶ ನಾಯಕ ತಿಳಿಸಿದರು.
ಅಗ್ನಿಶಾಮಕ ದಳದ ಅಧಿಕಾರಿ ಶಿವಕುಮಾರ ಬಾಗೇವಾಡಿ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಇಂದುಮತಿ ಮಣ್ಣೂರ, ಕಿರಿಯ ಅಂಭಿಯಂತರ ಅಜರ್ ನಾಟಿಕಾರ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಇದ್ದರು.