ಸಿಂದಗಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಖಂಡ ಕರ್ನಾಟಕ ರೈತ ಸಂಘ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮತ್ತು ಪ್ರಗತಿಪರ, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ, ಕರ್ನಾಟಕ ಬಂದ್ ಬೆಂಬಲಿಸಿ ಕೆಲಕಾಲ ರಸ್ತೆ ತಡೆ ನಡೆಸಿ ತಹಸೀಲ್ದಾರ್ ಸಂಜೀವಕುಮಾರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಸಿದ್ರಾಮಪ್ಪ ರಂಜಣಗಿ, ಸಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ, ಬಸನಗೌಡ ಧರ್ಮಗೊಂಡ ಮತ್ತಿತರರು ಮಾತನಾಡಿ, ಕೆಳ ಹಾಗೂ ಮೇಲಿನ ಸರ್ಕಾರಗಳೆರೆಡೂ ಕೃಷಿ ಮಸೂದೆ ಜಾರಿಗೆ ತಂದು ರೈತರ ಹಕ್ಕನ್ನು ಕಸಿದುಕೊಳ್ಳುವ ಮೂಲಕ ರೈತರ ಜೀವಹಾನಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೂಡಲೇ ಈ ಕೃಷಿ ಮಸೂದೆ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಶಿವಶರಣಪ್ಪಗೌಡ ಬಿರಾದಾರ, ಚನ್ನಪ್ಪಗೌಡ ಪಾಟೀಲ, ಈರಪ್ಪ ಅಂಕಲಗಿ, ಅರ್ಜುನ ಪೂಜಾರಿ, ಬಾಬು ಕೂಡಿ, ಅಶೋಕ ಅಲ್ಲಾಪೂರ, ರಾಜು ಬಡಿಗೇರ, ರಮೇಶ ಹೊರಕೇರಿ, ಸಿದ್ದು ಉಪ್ಪಾರ, ಮಲ್ಲಪ್ಪ ವಾಲೀಕಾರ, ಸಂಗಪ್ಪ ಬಿರಾದಾರ, ಬಸೀರ್‌ಅಹ್ಮದ್ ತಾಂಬೆ, ಎಸ್.ಜಿ. ದೇಶಪಾಂಡೆ, ಆರ್.ಎಸ್. ಜಮಾದಾರ, ಕೆ.ಬಿ. ವಸ್ತ್ರದ, ಜಿ.ಎಚ್. ಬಿರಾದಾರ, ಬಿ.ಎ. ರವದಿ. ಎಸ್.ಎಂ.ಹಿರೇಮಠ, ಎಸ್.ಎನ್. ಚಿಕ್ಕಮಠ, ಮಲ್ಲು ಚಳ್ಳಗಿ, ಎಂ.ಜಿ. ಪರಗೊಂಡ ಮತ್ತಿತರರಿದ್ದರು.