ಜಿಲ್ಲೆ

ಮೆಗಾ ಆಡಿಷನ್‌ಗೆ ಸಿಂಚನಾ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿಯಲ್ಲಿ ನಡೆದ ಕರ್ನಾಟಕದ ಬೆಸ್ಟ್ ಡ್ಯಾನ್ಸರ್ ಆಡಿಷನ್‌ನಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ೪ನೇ ತರಗತಿ ವಿದ್ಯಾರ್ಥಿನಿ ಪಿ.ಜಿ. ಸಿಂಚನ ಕಾವೇರಮ್ಮ ಪಾಲ್ಗೊಂಡು ಮುಂದಿನ ಮೆಗಾ ಆಡಿಷನ್‌ಗೆ ಆಯ್ಕೆಯಾಗಿದ್ದಾಳೆ. ಇವಳು ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ನೃತ್ಯ ಶಾಲೆಯ ತರಬೇತುದಾರ ಅಭಿಷೇಕ್ ಅವರಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾಳೆ. ಸಿಂಚನ ಕೋಪಟ್ಟಿ ಗ್ರಾಮದ ಪೊಡನೋಳನ ಗಿರೀಶ್ ಹಾಗೂ ಪವಿತ್ರ ದಂಪತಿ ಪುತ್ರಿ.