ಜಿಲ್ಲೆ

ಚಿದಂಬರ ನಾಮಸ್ಮರಣೆಯಿಂದ ಪಾಪ ಕರ್ಮ ನಾಶ

ಹಾನಗಲ್ಲ: ಈಶ್ವರನ ರೂಪರಾದ ಶಿವ ಚಿದಂಬರರ ಇತಿಹಾಸ, ಲೀಲೆಗಳನ್ನು ಸಾರುವ ಕಾರ್ಯಕ್ರಮಗಳಿಂದ ಧಾರ್ವಿುಕ ಮನೋಭಾವ ಬೆಳೆದು ಸತ್ಸಮಾಜ ನಿರ್ವಣಕ್ಕೆ ಸಹಕಾರಿಯಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಶಂಕರ ಮಂಗಲ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 104 ನೇ ಅಖಂಡ ವೀಣಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ವಾರ ನಿರಂತರ ಚಿದಂಬರ ನಾಮಸ್ಮರಣೆ ಕೈಗೊಂಡಿರುವುದು ಕಾರ್ಯಕ್ರಮದ ವಿಶೇಷ. ಶಿವನಾಮ ಸ್ಮರಣೆಗೆ ಮಹತ್ವದ ಶಕ್ತಿ ಇದ್ದು, ಪಾಪ, ಕರ್ಮಗಳನ್ನೆಲ್ಲ ನಾಶ ಮಾಡಲಿದೆ. ಇಂಥ ಸಪ್ತಾಹದಂತಹ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಸಮಾಜ ಸದಾಕಾಲ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳ ಉಳಿವಿಗೆ ಕಾಳಜಿ ವಹಿಸಿದೆ. ಜ. 26ರವರೆಗೆ ಶಂಕರ ಮಂಗಲ ಭವನದಲ್ಲಿ ಕಾಕಡಾರತಿ, ಪಾರ್ಥಿವೇಶ್ವರ ಪೂಜೆ, ಚಿದಂಬರೇಶ್ವರನಿಗೆ ಅಭಿಷೇಕ, ಸಾಮೂಹಿಕ ನಾಮಸ್ಮರಣೆ, ಆರತಿ-ನೈವೇದ್ಯ, ಸಾಂಪ್ರದಾಯಿಕ ಭಜನೆ, ಪ್ರವಚನ, ಕೀರ್ತನೆ, ಆರತಿ ಸೇರಿ ಇನ್ನಿತರ ಧಾರ್ವಿುಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಲಿದೆ ಎಂದು ತಿಳಿಸಿದರು.

ರ್ಕಹಳ್ಳಿಯ ಸುರೇಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸಪ್ತಾಹದ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀನಿವಾಸ ಶಿವಪೂಜಿ, ವಿಪ್ರ ಸಮಾಜದ ತಾಲೂಕಾಧ್ಯಕ್ಷ ರವಿಚಂದ್ರ ಪುರೋಹಿತ, ಸಮಿತಿ ಸಂಚಾಲಕರಾದ ಉದಯ ನಾಸಿಕ, ಗಿರೀಶ ದೇಶಪಾಂಡೆ, ಗೌರವಾಧ್ಯಕ್ಷರಾದ ಶಂಕರಭಟ್ ಜೋಶಿ, ಘನಶಾಮ ದೇಶಪಾಂಡೆ, ಕಾರ್ಯದರ್ಶಿಗಳಾದ ಕೃಷ್ಣ ಪೂಜಾರ, ಪ್ರಮೋದ ಕುಲಕರ್ಣಿ, ರಾಜಾರಾಂ ಕುಲಕರ್ಣಿ, ಮಾಲತೇಶ ಕಾಮನಹಳ್ಳಿ, ಗುರುನಾಥ ಕುಲಕರ್ಣಿ, ಆದರ್ಶ ಶೆಟ್ಟಿ, ಇತರರಿದ್ದರು.