ಕೋಟ: ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ರಜತ ವರ್ಷ ಸಂಭ್ರಮ ಸರಣಿ ಕಾರ್ಯಕ್ರಮ ಇತ್ತೀಚೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಜರುಗಿತು. ಸುಮನಾ ರವೀಂದ್ರ ಹೇರ್ಳೆ ಬರೆದಿರುವ ಶ್ರೀ ಗುರು ನರಸಿಂಹ ಕಾವ್ಯಧಾರೆ ಪುಸ್ತಕವನ್ನು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಬಿಡುಗಡೆ ಮಾಡಿದರು. ಸಾಹಿತಿ ಹರಿನರಸಿಂಹ ಉಪಾಧ್ಯಾಯ ಪುಸ್ತಕದ ಪರಿಚಯ ಮಾಡಿದರು.
ಸಂಗೀತ ಶಿಕ್ಷಕಿ ಮಾಲಿನಿ ರಮೇಶ್ ಕೃತಿಯ ಆಯ್ದ ಕೆಲವು ಹಾಡು ಹಾಡಿದರು. ಸಾಹಿತ್ಯ ಅಭಿಮಾನಿ ಲೇಖಕಿ ವಿಮಲಾ ನಾವಡ ಕುಂದಾಪುರ ಅವರನ್ನು ಮಹಿಳಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಸಿ.ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕೂಟ ಮಹಾಜಗತ್ತು ಪ್ರಮುಖರಾದ ಎಚ್.ಸತೀಶ್ ಹಂದೆ, ಸಿ.ಸುರೇಶ ತುಂಗ, ಪಿ.ಸಿ.ಹೊಳ್ಳ ಇದ್ದರು. ಸುಮಂಗಲಿ ನಾವಡ ಸನ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ ವಂದಿಸಿದರು. ಮಹಾಲಕ್ಷ್ಮೀ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.