ಜಿಲ್ಲೆ

ನವಮಂಗಳೂರು ಬಂದರಿಗೆ ಆಗಮಿಸಿದ ಸಿಲ್ವರ್ ವಿಸ್ಪರ್ ಪ್ರವಾಸಿ ಹಡಗು.

Mangaluru - Hariprasad Rai



ಮಂಗಳೂರು : ಪಣಂಬೂರಿನ ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೊದಲ ಪ್ರವಾಸಿ ಹಡಗು ಎಂಎಸ್ ಸಿಲ್ವರ್ ವಿಸ್ಪರ್ ಮಂಗಳವಾರ ಆಗಮಿಸಿತು. ವೆಸ್ಟ್ ಇಂಡೀಸ್‌ನ ದ್ವೀಪ ರಾಷ್ಟ್ರ ಬಹಮಾಸ್‌ನಿಂದ ಮುಂಬೈ ಮೂಲಲ ಮಂಗಳೂರು ಬಂದರಿಗೆ ಆಗಮಿಸಿದ ಈ ಹಡಗಿನಲ್ಲಿ 299ಪ್ರವಾಸಿಗರು ಮತ್ತು 296 ಸಿಬ್ಬಂದಿ ಬಂದಿಳಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಎನ್‌ಎಂಪಿಎ ಚೇರ್ಮನ್ ಡೆಪ್ಯುಟಿ ಚೇರ್ಮನ್ ಎಸ್.ಶಾಂತಿ ಉಪಸ್ಥಿತರಿದ್ದು ಪ್ರವಾಸಿಗರನ್ನು ಸ್ವಾಗತಿಸಿದರು. ಯಕ್ಷಗಾನ, ಭರತನಾಟ್ಯ ಪ್ರದರ್ಶನ ಸಹಿತ ಕರಾವಳಿಯ ಸಂಪ್ರದಾಯ ಪ್ರಕಾರ ಸ್ವಾಗತ ಕೋರಲಾಯಿತು.
ಬಳಿಕ ಪ್ರವಾಸಿಗರು ಕದ್ರಿ ಮಂಜುನಾಥ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ , ಮೂಡುಬಿದಿರೆಯ ಸಾವಿರ ಕಂಬದ ಬಸದಿ ಮೊದಲಾದ ಪ್ರದೇಶಗಳನ್ನು ಸಂದರ್ಶಿಸಿದರು. ಪ್ರವಾಸಿ ಹಡಗು ಮಂಗಳೂರಿನಿಂದ ಕೊಲಂಬೊ ಬಂದರಿಗೆ ಪ್ರಯಾಣ ಮಾಡಲಿದೆ.