ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದಿಂದ 25 ನೇ ವರ್ಷದ ‘ರಜತ ರಂಗ’ ಉದ್ಘಾಟನಾ ಸಮಾರಂಭ ಉದ್ಘಾಟಿಸಿದರು.  
ಜಿಲ್ಲೆ

ಕುತ್ಯಾಳದಲ್ಲಿ ರಜತ ರಂಗ ಉದ್ಘಾಟನೆ

ಮಧೂರು: ರಾಮದಾಸ ನಗರದ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ವತಿಯಿಂದ ಕೇಂದ್ರದ 25ನೇ ವರ್ಷದ ಅಂಗವಾಗಿ ‘ರಜತ ರಂಗ’ ಉದ್ಘಾಟನೆ ಸೋಮವಾರ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.
ಬೆಳಗ್ಗೆ 10ಕ್ಕೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕುತ್ಯಾಳ ಶ್ರೀ ಕ್ಷೇತ್ರ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜನಾರ್ದನ ನಾಯ್ಕ ಸಿ.ಎಚ್. ಉದ್ಘಾಟಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ, ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಯ್ಯ ಹಾಗೂ ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ್ ಕೂಡ್ಲು ಮತ್ತು ಕೆ.ಕೆ.ಶ್ಯಾನುಭಾಗ್, ಶಿವಶಂಕರ ಬಲಿಪ ಮೊದಲಾದವರಿದ್ದರು. ಸತ್ಯನಾರಾಯಣ ತಂತ್ರಿ ಸ್ವಾಗತಿಸಿದರು. ಗುರುರಾಜ ಹೊಳ್ಳ ಬಾಯಾರು ನಿರೂಪಿಸಿದರು. ಸವಿತಾ ವಂದಿಸಿದರು.

ಸಂಸ್ಮರಣೆ, ತಾಳಮದ್ದಳೆ

ಕೀರ್ತಿಶೇಷ ಕೂಡ್ಲು ಸುಬ್ರಾಯ ಶ್ಯಾನುಭೋಗ್ ಸಂಸ್ಮರಣಾ ಭಾಷಣವನ್ನು ರಾಜೇಂದ್ರ ಬಜಕೂಡ್ಲು ನಡೆಸಿದರು. ಪತ್ರಕರ್ತ ವಿ.ಜಿ.ಕಾಸರಗೋಡು ಕೀರ್ತಿಶೇಷ ಹಿರಿಯ ಬಲಿಪ ನಾರಾಯಣ ಭಾಗವತರ ಸಂಸ್ಮರಣಾ ಭಾಷಣ ಮಾಡಿದರು. ಶಿವಶಂಕರ ಬಲಿಪ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ‘ಜ್ವಾಲಾ ಪ್ರತಾಪ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶಿವಶಂಕರ ಬಲಿಪ, ಚಂದ್ರಶೇಖರ ಭಟ್ ಕೊಂಕಣಾಜೆ, ಲಕ್ಷ್ಮೀಶ ಬೇಂಗ್ರೋಡಿ, ಮುಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ವೇಣುಗೋಪಾಲ ಶೇಣಿ, ಹರಿನಾರಾಯಣ ಮಯ್ಯ, ಗುರುರಾಜ ಹೊಳ್ಳ ಬಾಯಾರು, ಅಚ್ಯುತ ಬಲ್ಯಾಯ, ಸುರೇಶ ಮಣಿಯಾಣಿ ಪಾತ್ರಗಳನ್ನು ನಿರ್ವಹಿಸಿದರು.

ಯಕ್ಷಗಾನ ಬಯಲಾಟ