ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರಿನ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಏರ್ಪಡಿಸಿದ್ದ 12ನೇ ಕರ್ನಾಟಕ ಶೂಟಿಂಗ್ ಚಾಂಪಿಯನ್ -2024ರ ಪ್ಯಾರಾ ಶೂಟಿಂಗ್ ಸ್ಪರ್ಧೆಯ 10 ಮೀಟರ್ ಏರ್ ಪಿಸ್ತೂಲ್ (ಎನ್ಆರ್) ವಿಭಾಗದಲ್ಲಿ ಕೇಶವ ಪ್ರಭಾಕರ ತೆಲಗು ಬೆಳ್ಳಿ ಪದಕ ಜಯಿಸಿದ್ದಾರೆ.
ಕೇಶವ ತೆಲಗು ಸಾಧನೆಗೆ ತರಬೇತುದಾರ ರವಿಚಂದ್ರ ಬಾಳೆಹೊಸೂರು, ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ನಿರ್ದೇಶಕ ಶಿವಾನಂದ ಬಾಳೆಹೊಸೂರು ಹಾಗೂ ಬೆಂಗಳೂರು ಸಿಬಿಎಂ ಟ್ರಸ್ಟ್ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿವೆ.