ಎನ್.ಆರ್.ಪುರ: ತರೀಕೆರೆಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ ಗ್ರೀಷ್ಮಾ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ.
14 ವರ್ಷದ ಒಳಗಿನ ಕಟಾ ವಿಭಾಗ, 45 ಕೆ.ಜಿ. ತೂಕದ ಕುಮಿಟಿ ವಿಭಾಗದಲ್ಲಿ ಗ್ರೀಷ್ಮಾ ದ್ವಿತೀಯ ಸ್ಥಾನ ಗಳಿಸಿದರು. ಗ್ರೀಷ್ಮಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿ. ಗ್ರೀಷ್ಮಾ ಕಲಾವಿದ ಅಭಿನವ ಗಿರಿರಾಜ್ ಅವರ ಪುತ್ರಿ.