ಜಿಲ್ಲೆ

ಬೆಳ್ಳಿ ಗದೆ ಪಡೆದ ಇಮ್ರಾನ್​ ಮುಜಾವರ

ಸೋಮಲಿಂಗ ತಳವಾರ

ಬೆಳ್ಳಿ, ಗದೆ, ಪಡೆದ, ಇಮ್ರಾನ್​, ಮುಜಾವರ,

ನಿಪ್ಪಾಣಿ: ತಾಲೂಕಿನ ಕುರ್ಲಿ&ಅಪ್ಪಾಚಿವಾಡಿಯಲ್ಲಿ ಶ್ರೀಹಾಲಸಿದ್ಧನಾಥ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಕ್ರಮಾಂಕದ ಪಂದ್ಯದಲ್ಲಿ ಕೊಲ್ಲಾಪೂರದ ಶಾಹುಪುರಿಯ ಜಟ್ಟಿ ರಾಮ ಪೋಟರೆಗೆ ಸೋಲುಣಿಸುವ ಮೂಲಕ ಇಸ್ಲಾಮಪುರ ಗಂಗಾವೆಸ್​ನ ಜಟ್ಟಿ ಇಮ್ರಾನ್​ ಮುಜಾವರ ಬೆಳ್ಳಿಯ ಗದೆೆ ತಮ್ಮದಾಗಿಸಿಕೊಂಡರು.

ಎರಡನೇ ಕ್ರಮಾಂಕದ ಕುಸ್ತಿ ಪಂದ್ಯದಲ್ಲಿ ನಿಗವೆ ಖಾಲಸಾ ಸೈನ್ಯದಳದ ಮಲ್ಲ ಸೋನಬಾ ಗೋಂಗಾನೆ ಅವರು ಬೆಳಗಾವಿ ಸೈನ್ಯದಳದ ಮಲ್ಲ ಸಂದೀಪ ಹಳದುಂಡಕರ ಅವರನ್ನು ಪರಾಭವಗೊಳಿಸಿದರು. ಮೂರನೇ ಕ್ರಮಾಂಕದ ಪಂದ್ಯದಲ್ಲಿ ತಳಂದಗೆಯ ಮಲ್ಲ ಪೃಥ್ವಿರಾಜ ಖರಾತ ತಾಲೂಕಿನ ಭವಶಿ ಗ್ರಾಮದ ಪೈಲ್ವಾನ್​ ಮಹಾದೇವ ಪಾಟೀಲ ಅವರಿಗೆ ಸೋಲುಣಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಪ್ರಕಾಶ ಇಂಗಳಗಿ, ಐದನೇ ಕ್ರಮಾಂಕದಲ್ಲಿ ಕಿರಣ ಪಾಟೀಲ, ಆರನೇ ಕ್ರಮಾಂಕದಲ್ಲಿ ಸಚಿನ ಶಿಂಧೆ ಹಾಗೂ ಏಳನೇ ಕ್ರಮಾಂಕದ ಪಂದ್ಯದಲ್ಲಿ ಅತುಲ್​ ಮಗದುಮ್​ ಜಯಶಾಲಿಯಾದರು. ಸುಮಾರು 30ಕ್ಕೂ ಅಧಿಕ ಕುಸ್ತಿ ಪಂದ್ಯಗಳು ನೋಡುಗರ ಗಮನ ಸೆಳೆದವು.

ಮುಖಂಡ ಉತ್ತಮ ಪಾಟೀಲ, ವಿಎಸ್​ಎಂ ಸಂಚಾಲಕ ಸಂಜಯ ಶಿಂತ್ರೆ, ನಿರಂಜನ ಪಾಟೀಲ, ಗಜಾನನ ಕಾವಡಕರ, ಅರುಣ ನಿಕಾಡೆ, ಅಜಯ ಪಾಟೀಲ, ನಿವಾಸ ಪಾಟೀಲ, ಕಿಸನ ಚವಾಣ, ರಾು ನಿಕಾಡೆ, ರಾಜೇಂದ್ರ ಡಗೆ, ದತ್ತಾ ಪಾಟೀಲ, ಬಾಳು ಮಾಳಿ, ಬಾಳಾಸಾಹೇಬ ಪಾನಾರೆ, ವಾಸು ದಿವಟೆ, ಶಂಕರ ಕಮತೆ ಇತರರಿದ್ದರು.