ಜಿಲ್ಲೆ

ಶ್ರೀ ಶಿಶಿಲೇಶ್ವರನಿಗೆ ಬೆಳ್ಳಿ ಕಲಶ ಸಮರ್ಪಣೆ

ಸೌಮ್ಯ ಆರ್

ಕೊಕ್ಕಡ: ಶಿಶಿಲದ ಶ್ರೀ ಶಿಶಿಲೇಶ್ವರ ಸ್ವಾಮಿಯ ಶಿವರಾತ್ರಿ ಉತ್ಸವ ಅತ್ಯಂತ ವೈಭವದಿಂದ ಜರುಗಿತು. ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಆಶೀರ್ವಾದ ಪಡೆದರು.

ಶ್ರೀ ದೇವರಿಗೆ 1.50 ಲಕ್ಷ ರೂ. ವೆಚ್ಚದಲ್ಲಿ 7 ಬೆಳ್ಳಿಯ ಕಲಶವನ್ನು ಶಿಶಿಲ ದೇವಳದಲ್ಲಿ ಸುಮಾರು 35 ವರ್ಷ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀನಿವಾಸ ಮೂಡೆತ್ತಾಯ ಮತ್ತು ಮನೆಯವರು ಸಲ್ಲಿಸಿದರು. ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿ ಮೂಲಕ ಬೆಳ್ಳಿಯ ಕಲಶ ಸಮರ್ಪಿಸಲಾಯಿತು. ಜಯರಾಮ ನೆಲ್ಲಿತ್ತಾಯ, ರಾಧಾಕೃಷ್ಣ ಭಟ್, ಆನಂದ ಪೂಜಾರಿ ಮೊದಲಾದವರು ಜತೆಗಿದ್ದರು.