ಹುಬ್ಬಳ್ಳಿ : ತಡಸದ ಶ್ರೀ ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಗಾಯತ್ರಿ ಪ್ರತಿಷ್ಠಾಪನೆಯ ರಜತ ಮಹೋತ್ಸವ, ಹೋಮ ಹವನ, ಸಂತರ ಸಮಾಗಮ ಏ. 11 ರಿಂದ 16ರವರೆಗೆ ತಪೋಭೂಮಿಯಲ್ಲಿ ನಡೆಯಲಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ವಿನಾಯಕ ಆಕಳವಾಡಿ, ರಜತ ಮಹೋತ್ಸವ ಅಂಗವಾಗಿ ಏ. 9ರಿಂದ ಶ್ರೀ ಗುರುಚರಿತ್ರೆ 108 ಪಾರಾಯಣ, ಗಂಗಾಪೂಜೆ, ಸ್ಥಾನ ಪವನಮ, ಪಂಚಗವ್ಯಾದಿ ಶುದ್ಧಿ ಸೇರಿದಂತೆ ಪೂರ್ವಭಾವಿ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.
ನಿತ್ಯ ಬೆಳಗ್ಗೆ 6.30ಕ್ಕೆ ಕಾಕಡಾರತಿ, 8 ಗಂಟೆಗೆ ಪಾರಾಯಣ ಜಪ, ನಾಮಸ್ಮರಣೆ, ಪೂಜೆ, ಹವನ, 9 ರಿಂದ 10.30ರವರೆಗೆ ವಿವಿಧ ಮಹಿಳಾ ಮಂಡಳಗಳಿಂದ ಲಲಿತಾ ಸಹಸ್ರನಾಮ, ದಕ್ಷಿಣಾಮೂತಿರ್ ಸ್ತೋತ್ರ, 11 ಗಂಟೆಗೆ ಆಶೀರ್ವಚನ ನಡೆಯಲಿದೆ ಎಂದು ತಿಳಿಸಿದರು.
ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ, 3 ಗಂಟೆಗೆ ಭಜನೆ, 4ಕ್ಕೆ ಸತ್ಸಂಗ, ಸಂಜೆ 5ರಿಂದ ಉದಯೋನ್ಮುಖ ಕಲಾವಿದರಿಂದ ಕಾರ್ಯಕ್ರಮ, 7ರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದರು.
ತಡಸ ಗಾಯತ್ರಿ ದೇವಸ್ಥಾನಕ್ಕೆ ಹಿಮಾಚಲದವರೆಗೂ ಭಕ್ತರು ಇದ್ದಾರೆ. ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಲಾಂತರ ಭಕ್ತರು ಆಗಮಿಸುವ ನಿರೀೆ ಇದೆ. ಈಗಾಗಲೇ ಹೋಮ, ಕುಂಡಗಳನ್ನು ಸ್ಥಾಪಿಸಲಾಗಿದೆ. ಭಕ್ತರಿಗೆ ಉಪಹಾರ, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿರುವಷ್ಠು ಶೌಚಗೃಹಗಳನ್ನು ಸಹ ಸ್ಥಾಪಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಇತರ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾರವಾರದ ಪದ್ಮಪುಷ್ಪ ಗುರುಕುಲದ ಶಿವಮೂತಿರ್ ಜೋಯ್ಸ್ ಮಾತನಾಡಿ, ಏ. 11ರಂದು ಸಂತ ಸಮಾಗಮ ಹಾಗೂ ಸ್ಥಳಿಯ ಕಲಾವಿದರಿಂದ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
12ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಸಂಜೆ 5ರಿಂದ 6 ಗಂಟೆವರೆಗೆ ಸಿದ್ಧಾಪುರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಅವರಿಂದ ಆಶೀರ್ವಚನ, ಸಂಜೆ 6ರಿಂದ ಮಾಯಾ ಮಂಥರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
13, 14 ಮತ್ತು 15ರಂದು ವಿವಿಧ ಪ್ರಮುಖ ಸ್ವಾಮೀಜಿಗಳಿಂದ ಪ್ರವಚನ, ಗಣ್ಯರಿಂದ ಉಪನ್ಯಾಸ, ಸಂಜೆ ದಾಸವಾಣಿ, ಭಕ್ತಿ ಸಂಗೀತ, ಹನುಮಾನ ಚಾಲೀಸ ಪಠಣ, ಭರತನಾಟ್ಯ ನಡೆಯಲಿವೆ. 15ರಂದು ಸಂಜೆ 4ಕ್ಕೆ ತಡಸ ಕ್ರಾಸ್ನಿಂದ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರ ಶೋಭಾಯಾತ್ರೆ ನಡೆಯಲಿದೆ. 16 ರಂದು ಹೋಮಗಳ ಪೂರ್ಣಾಹುತಿ ನಡೆಯಲಿದೆ ಎಂದು ತಿಳಿಸಿದರು.
ರಜತ ಮಹೋತ್ಸ ಅಂಗವಾಗಿ ವಿವಿಧ ಹವನಗಳು ನಡೆಯಲಿವೆ. ಋಗ್ವೇದ ಸಂಹಿತಾ ಮತ್ತು ಯಜುರ್ವೇದ ಸಂಹಿತಾ ಸ್ವಾಹಾಕಾರ ಹೋಮ, ಗಣಪತಿ ಹೋಮ, ಶತಚಂಡಿಯಾಗ, ಸುಬ್ರಹ್ಮಣ್ಯ ಹೋಮ, ಅನ್ನಪೂರ್ಣೇಶ್ವರಿ ಹೋಮ, ಸುದರ್ಶನ ಹೋಮ, ಮಹಾರುದ್ರಯಾಗ, ದತ್ತ ಹವನ, ಶ್ರೀ ರಾಮತಾರಕ ಹೋಮ, ಧನ್ವಂತರಿ ಹೋಮ, ಪುರುಷಸೂಕ್ತ ಹೋಮ, ಶ್ರೀ ಸೂಕ್ತ ಹವನ, ಅರುಣ ಹೋಮ, ಶ್ರೀ ಲಕ್ಷಿ$್ಮ ನಾರಾಯಣ ಹೃದಯ ಹವನ, ಶ್ರೀ ಪವಮಾನ ಹೋಮ ನಡೆಯಲಿವೆ ಎಂದು ವಿವರಿಸಿದರು.
ಅಶೋಕ ಹರಪನಹಳ್ಳಿ, ರ್ಪೂಣಚಂದ್ರ ಂಟಸಾಲಾ, ನೀಲಕಂಠ ಆಕಳವಾಡಿ, ಅರವಿಂದ ಮುತಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.