ಜಿಲ್ಲೆ

ರಜತ ಮಹೋತ್ಸವ: ಕಬಡ್ಡಿ ಪಂದ್ಯಾವಳಿಗೆ ಚಾಲನೆ

reportergvt

ಕೊಪ್ಪಳ :ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಕಬಡ್ಡಿ ಪಂದ್ಯಾವಳಿಗೆ ಸೋಮವಾರ ನಗರದ‌‌ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸಿ ಎಂ.ಸುಂದರೇಶ ಬಾಬು ಚಾಲನೆ ನೀಡಿದರು.

ನಂತರ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳು,  ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಕೊಪ್ಪಳ ಜಿಲ್ಲೆ ಉದಯವಾಗಿ 25 ವರ್ಷಗಳ ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವಿಶೇಷ ಕಾಳಜಿ ವಹಿಸಿ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ವಿವಿಧ ಕ್ರೀಡೆಗಳನ್ನು ಹಮ್ಮಿಕೊಂಡಿದೆ.

ವಿಜೇತ ತಂಡಕ್ಕೆ ಪ್ರಥಮ ಬಹುಮಾನ 10,000 ರೂ., ದ್ವಿತೀಯ 7000 ಹಾಗೂ ತೃತೀಯ 5000 ರೂ ಬಹುಮಾನ ನೀಡಲಾಗುವುದೆಂದರು.ಕ್ರೀಡಾ‌‌ ಸಮಿತಿ ಅಧ್ಯಕ್ಷ ಜಿ.ಎಂ. ದೊಡ್ಡಮನಿ ಹಾಗು ಸಮಿತಿ ಸದಸ್ಯರು ಇದ್ದರು.

ಮಾರ್ಚ 7ರಂದು ಮಹಿಳಾ ಪಂದ್ಯಾವಳಿ: ಮಾ.6 ರಂದು ಪುರುಷರ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆದಿವೆ. ಅದೇ ರೀತಿ ಮಾ.7 ರಂದು ಮಹಿಳೆಯರಿಗಾಗಿ ಸ್ಪರ್ಧೆಗಳು ನಡೆಯಲಿವೆ.