ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟçದ ವಿಕಾಸಕ್ಕೆ ಅಗತ್ಯವಾದ ಮಾನವ ಸಂಪನ್ಮೂಲದ ಭಾಗವಾಗಿರುವ ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ನವಲಗುಂದ ತಾಲೂಕು ಮಣಕವಾಡ ದೇವಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ತಲವಾಯಿ ಗ್ರಾಮದ ಶ್ರೀ ಕಲ್ಮೇಶ್ವರ ಯುವಕ ಮಂಡಳದ ರಜತ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯುವಕರು ಜಗತ್ತು ನೆನಪಿಡುವ ಕೆಲಸ ಮಾಡಬೇಕು. ತಂದೆ- ತಾಯಿಯ ವೃದ್ಧಾಪ್ಯದ ಸಂದರ್ಭದಲ್ಲಿ ಅತ್ಯಂತ ಶ್ರದ್ಧೆಯಿಂದ ಅವರ ಸೇವೆ ಮಾಡಬೇಕು ಎಂದರು.
ಮಹಾ0ತಯ್ಯ ಹಿರೇಮಠ, ಬಸವರಾಜ ಮಾಳಾಪೂರ, ಬಸಲಿಂಗಯ್ಯ ಹಿರೇಮಠ, ಕನಕೂರು ಗ್ರಾ.ಪಂ ಅಧ್ಯಕ್ಷ ರಾಜು ಹುಡೇದ, ಚಿನ್ನು ತಿರ್ಲಾಪೂರ, ಶಿಕ್ಷಕ ಶಿವಾನಂದ ಹೂಗಾರ, ಹನುಮಂತಪ್ಪ ತಿರ್ಲಾಪೂರ, ಶಿವಪುತ್ರಪ್ಪ ಮುಗಳಿ, ಹನುಮಂತಪ್ಪ ಹೂಗಾರ, ಹನುಮಂತಪ್ಪ ಕುಕನೂರ, ಗಿರಿಮಲ್ಲಯ್ಯ ಉಮಚಗಿಮಠ, ಇತರರಿದ್ದರು.