ಉಡುಪಿ: ಬೆಳ್ಳಂಪಳ್ಳಿ ಭೂತರಾಜರ ಸನ್ನಿಧಿಯ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿ ಸಂದರ್ಭ ರಸ್ತೆ ಮಧ್ಯಭಾಗದಲ್ಲಿ ಭೂಕುಸಿತ ಕಂಡುಬಂದಿದ್ದು, ಅದರಲ್ಲಿ ಬೆಳ್ಳಿಯ ಒಂಟೆಮೂರ್ತಿ ಪತ್ತೆಯಾಗಿದೆ.
ಕಾಮಗಾರಿ ನಡೆಯುವಾಗ ಕಂಡುಬಂದ ಬಾವಿಯಲ್ಲಿ 6*6 ಗಾತ್ರದ ಮೂರ್ತಿ ಸಿಕ್ಕಿದೆ. ಈ ಜಾಗದ ಪಕ್ಕದಲ್ಲಿ ನಾಗ ಸನ್ನಿಧಿ ಇದೆ. ಸಂಶೋಧನಾಸಕ್ತರು ಉತ್ಖನನ ನಡೆಸಬಹುದು.
ಸಂಶೋಧಕ ಕೃಷ್ಣಯ್ಯ ಅವರಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಅಧ್ಯಯನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭೂತರಾಜ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್‌ಶೆಟ್ಟಿ ಬೆಳ್ಳಂಪಳ್ಳಿ ತಿಳಿಸಿದ್ದಾರೆ.