ಕಮಲಾಪುರದ ನೀರಾವರಿ ಇಲಾಖೆಯ ಉಪವಿಭಾಗ ಕಚೇರಿಯ ಎಸ್‌ಡಿಸಿ ನೀಲಮ್ಮಗೆ ಕಂಪ್ಲಿಯ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ್ ಬಣ) ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು. ರೈತರಾದ ಜೆ.ನಾಗರಾಜ, ಎಚ್.ನಾಗರಾಜ, ಮಣಿಕಂಠ, ರೇಣುಕಾಶರ್ಮ ಇತರರಿದ್ದರು. 
ಜಿಲ್ಲೆ

ಹೂಳು ತೆಗೆಸಿ ಮಡಿಗಾಲುವೆ ನಿರ್ಮಿಸಿ

ಕಂಪ್ಲಿ: ಪಟ್ಟಣದ ಗಣೇಶ ದೇವಸ್ಥಾನ ಬಳಿ ಸರ್ವೇ ನಂಬರ್ 797ರ ಜಮೀನು ಪಕ್ಕದಲ್ಲಿನ ಮಡಿಗಾಲುವೆ ಮುಚ್ಚಿಹೋಗಿದ್ದು, ಹೂಳು ತೆಗೆಸುವಂತೆ ಆಗ್ರಹಿಸಿ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ( ಜೆ.ಕಾರ್ತಿಕ್ ಬಣ) ಪದಾಧಿಕಾರಿಗಳು ಮಂಗಳವಾರ ಕಮಲಾಪುರದ ನೀರಾವರಿ ಇಲಾಖೆ ಕಚೇರಿ ಎಸ್‌ಡಿಸಿ ನೀಲಮ್ಮಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಪಟ್ಟಣದ ಗಣೇಶ ಗುಡಿ ಬಳಿ ನಂ.64 ಮಡಿಗಾಲುವೆ ಮುಚ್ಚಿ ಹೋಗಿದೆ. ರೈತರ ಹೊಲ-ಗದ್ದೆಗಳಿಗೆ ನೀರು ಹರಿಸಲು ತೊಂದರೆಯಾಗುತ್ತಿದೆ. ಮುಚ್ಚಿಹೋದ ಮಡಿಗಾಲುವೆಯ ಹೂಳು ತೆಗೆಸಿ ಮತ್ತೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.