ಮೈಸೂರು: ಅಭಿವೃದ್ಧಿ ಸಂಸ್ಥೆಯಿಂದ ನಗರದ ನಂಜರಾಜ ಬಹುದ್ದೂರ್ ಛತ್ರದಲ್ಲಿ 17 ದಿನಗಳ ಕಾಲ ಆಯೋಜಿಸಿರುವ ‘ಸಿಲ್ಕ್ ಇಂಡಿಯಾ-2025’ಕ್ಕೆ ಶನಿವಾರ ಚಾಲನೆ ನೀಡಲಾಯಿತು. ನಟಿ ರಿಷಾಗೌಡ ಮೇಳಕ್ಕೆ ಚಾಲನೆ ನೀಡಿ ಶುಭಕೋರಿದರು. ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಭಿನಂದನ ಗೌಡ ಇತರರು ಇದ್ದರು.
ದೇಶದ ಎಲ್ಲ ರಾಜ್ಯಗಳಿಂದ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಇದಾಗಿದ್ದು, ಮೊಟ್ಟ ಮೊದಲ ಬಾರಿಗೆ ಸ್ಪೆಷಲ್ ಬನಾರಸ್ ಸೀರೆಗಳ ಭರಾಟೆ ಇರಲಿದೆ. ದೇಶದ ಹವಾಗುಣಕ್ಕೆ ಅನುಗುಣವಾಗಿ ನಾಲ್ಕು ವಿವಿಧ ಪ್ರಭೇದದ ರೇಷ್ಮೆಗಳು ದೊರೆಯುತ್ತವೆ.
ನೇಕಾರರು ಮತ್ತು ಕುಶಲಕರ್ಮಿಗಳು ತಯಾರಿಸಿ ಉತ್ಪನ್ನಗಳನ್ನು ಗ್ರಾಹಕರಿಗೆ ಮದ್ಯವರ್ತಿಗಳು ಇಲ್ಲದಂತೆ ನೇರವಾಗಿ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಈ ಮೇಳ ಉದ್ದೇಶವಾಗಿದೆ.
ಜೂನ್ ಒಂದರ ವರೆಗೆ ಆಯೋಜಿಸಿರುವ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರದ ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 60 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಮೈಸೂರು ಜನತೆಯ ಮುಂದೆ ಇಡಲಿದ್ದಾರೆ. ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ.
ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕೋಲ್ಕತ್ತಾ ಗಣಪತಿ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು ಆಕರ್ಷಕ ಬೆಲೆಗೆ ಲಭ್ಯ ಇವೆ. ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೇಟಿರಿಯಲ್‌ಗಳು ಮತ್ತು ಸೀರೆಗಳು, ಬಾಗಲ್‌ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್‌ಉಳ್ಳ ಮುಲ್‌ಬಾರಿ ಸಿಲ್ಕ್,ಕೋಲ್ಕತ್ತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್‌ದಾನಿ ರೇಷ್ಮೆ, ಶಿಫಾನ್ ಸೀರೆ ಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ.
ನ್ಯಾಯಯುತ ಬೆಲೆಯಲ್ಲ್ಲಿ ಲಭ್ಯ: ಮಾರಾಟ ಮೇಳದಲ್ಲಿ ಕುರ್ತಾ, ಸ್ಟೋಲ್ಸ್, ಶಾಲುಗಳು, ಸಲ್‌ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್‌ಗಳು ಮತ್ತು ಬೆಡ್‌ಶೀಟ್‌ಗಳನ್ನು ಈ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ಈ ವಸ್ತುಗಳನ್ನು ಉತ್ವಾದಕರೆ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿರುವುದರಿಂದ ವಸ್ತುಗಳು ನ್ಯಾಯಯುತ ಬೆಲೆಯಲ್ಲ್ಲಿ ದೊರಕುತ್ತದೆ ಎಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.