ಆನೇಕಲ್ : ಬಿದರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಲ್ಕ್ ಾರಂ ಗೇಟ್ನಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ಗ್ರಾಮ ಪಂಚಾಯಿತಿ ಅನುದಾನ ಹಾಗೂ ದಾನಿಗಳ ಸಹಯೋಗದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಬಿದರಗುಪ್ಪೆ ಗ್ರಾಪಂ ಸದಸ್ಯರಾದ ಬಿದರಗುಪ್ಪೆ ಬಿ.ರಾಜೇಶ್ ಮತ್ತು ಬಿ.ಆರ್.ಮೂರ್ತಿ ಚಾಲನೆ ನೀಡಿದರು.
ಸದಸ್ಯ ಬಿ.ರಾಜೇಶ್ ಮಾತನಾಡಿ, 20 ವರ್ಷಗಳಿಂದ ಸಿಲ್ಕ್ ಫಾರಂ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರು ಪ್ರತಿ ನಿತ್ಯ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವುದನ್ನು ಮನಗೊಂಡು ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅನುದಾನ ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿ ಇತರ ದಾನಿಗಳ ಸಹಕಾರದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದರು. ಸದಸ್ಯ ಬಿ.ಆರ್ ಮೂರ್ತಿ ಮಾತನಾಡಿ, ಚುನಾವಣೆ ಸಂಧರ್ಭದಲ್ಲಿ ಈ ಭಾಗದ ಜನರಿಗೆ ನೀಡಿದ ಭರವಸೆಯ ಪೈಕಿ ಶೇ.90 ಪೂರೈಸಿರುವ ತೃಪ್ತಿ ನಮಗಿದೆ ಎಂದರು.
ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಬಮುಲ್ ಮಾಜಿ ಅಧ್ಯ ಬಿ.ಜಿ.ಆಂಜಿನಪ್ಪ, ಬಿದರಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯೆ ಅನುಪಮಾ ನಾರಾಯಣ್, ಉಪಾಧ್ಯೆ ಸರಸ್ವತ್ತಮ್ಮ ಶ್ರೀನಿವಾಸ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರಾದ ಸಂತೋಷ್, ಪವನ್, ವಿಶ್ವನಾಥ್, ಮುರಳಿ, ಯಲ್ಲಪ್ಪ, ಕೃಷ್ಣಪ್ಪ ಇದ್ದರು.
ಸಮಾಜಕ್ಕೆ ಒಳಿತಾಗಬೇಕಾದರೆ ನಾವು ನಮ್ಮ ಕೈಲಾದ ಸಹಾಯ ಮಾಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ಬೆದರಗುಪ್ಪೆ ಗ್ರಾಮದಲ್ಲಿ ಎಲ್ಲರೂ ಕೈಜೋಡಿಸಿ ರಸ್ತೆಯನ್ನು ಚೆನ್ನಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮುಂದಾಗಿರುವುದು ಮಾದರಿ ಎನಿಸಿದೆ. | ಕೃಷ್ಣಯ್ಯ ಶೆಟ್ಟಿ ಮಾಜಿ ಸಚಿವ