ಶಿರಸಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಬಿಜೆಪಿ ನಗರ ಮಂಡಳದ ಪ್ರಮುಖರು ಬುಧವಾರ ಸಂಜೆ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ನಗರದ ಅಂಚೆ ವೃತ್ತದಲ್ಲಿ ದೀಪ ಬೆಳಗಿಸುವ ಮೂಲಕ ನಗರದ ಸಿಪಿ ಬಜಾರ್ ಮತ್ತಿತರ ಕಡೆ ಮೆರವಣಿಗೆ ನಡೆಸಿ ಭಯೋತ್ಪಾದನಾ ಕೃತ್ಯದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸದಸ್ಯೆ ವೀಣಾ ಶೆಟ್ಟಿ, ಗಣಪತಿ ನಾಯ್ಕ, ರಾಘು ಶೆಟ್ಟಿ, ಉಷಾ ಹೆಗಡೆ, ನಾಗರಾಜ ನಾಯ್ಕ, ರಾಕೇಶ ತಿರುಮಲೆ, ಅನೀಶ ತಹಸೀಲ್ದಾರ ಇತರರು ಭಾಗವಹಿಸಿದ್ದರು.