ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರಿನ ಎಂಎಂಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಸಿಗ್ನೇಚರ್ ಡ್ಯಾನ್ಸ್ ಕಂಪನಿ ಸಮಗ್ರ ಚಾಂಪಿಯನ್ ಶಿಪ್ ಪಟ್ಟ ತನ್ನದಾಗಿಸಿಕೊಂಡಿದೆ.
೧೪ ಚಿನ್ನದ ಪದಕ, ೩ ಬೆಳ್ಳಿ ಪದಕ, ೧ ಕಂಚಿನ ಪದಕ ಸೇರಿದಂತೆ ಒಟ್ಟಾರೆ ೧೮ ಪದಕ ಪಡೆಯಿತು.
ಹರ್ಷಿತ್‌ಕುಮಾರ್ ೩ ಚಿನ್ನದ ಪದಕ ಗಳಿಸಿದರೆ, ಸನಿಹ, ಸಿಂಚನ, ನಿಶ್ಚಲ್, ಮಾನ್ಯ, ಚರಿತ್, ಧೀರಜ್ ತಲಾ ೨ ಚಿನ್ನದ ಪದಕ ಪಡೆದರು. ಒಟ್ಟು ೫೧ ಜನರಿರುವ ಸಿಗ್ನೇಚರ್ ಡ್ಯಾನ್ಸ್ ಕಂಪನಿ ತಂಡ ಪ್ರಥಮ ಸ್ಥಾನ ಪಡೆಯಿತು. ಪದಕ ವಿಜೇತರು ಫೆಬ್ರವರಿ ತಿಂಗಳಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾರೆ. ತಂಡಕ್ಕೆ ಡಿಕೆಡಿ ವಿಜೇತ ರಾಹುಲ್ರಾವ್ ಹಾಗೂ ಸಹ ತರಬೇತುದಾರ ಪೃಥ್ವಿ ನಾಯಕ್ ತರಬೇತಿ ನೀಡಿದರು.