ಮೂಡಲಗಿ: ಮೂಡಲಗಿಯ ಕಲ್ಮೇಶ್ವರ ವತ್ತದಲ್ಲಿ ಅರಭಾವಿ ಹಾಗೂ ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಮತ ಕಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಹಾಗೂ ಪ್ರತಿಭಟನಾ ಕಾರ್ಯಕ್ರಮ ಜರುಗಿತು.
ಅರಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಮಗದುಮ ಮಾತನಾಡಿ, ಪ್ರಧಾನಮಂತ್ರಿ ಮತಗಳ್ಳತನದಿಂದ ಚುನಾವಣೆ ಗೆದ್ದು ಆಡಳಿತ ನಡೆಸುತ್ತಿದ್ದಾರೆ. ಅವರ ಗೆಲುವು ವಾಮಮಾರ್ಗದಿಂದ ಕೂಡಿದ್ದು, ಮುಂಬರುವ ದಿನಗಳಲ್ಲಿ ಮತಗಳ್ಳತನ ಮಾಡಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮುಖಂಡರಾದ ರವಿ ಮೂಡಲಗಿ, ಸೇವಾದಳ ಸಂಚಾಲಕ ಗುರುನಾಥ ಉಪ್ಪಾರ, ಮೀರಾಸಾಬ್ ಅನ್ಸಾರಿ, ಸಿದ್ಧಾರೂಢ ಸನದಿ, ಮುತ್ತಪ್ಪ ದಡ್ಡಿ, ಮುತ್ತಪ್ಪ ಕರಬಣ್ಣವರ, ಚಂದ್ರಪ್ಪ ನಾಯಿಗ್ಲಂಜ, ಇಜಾಜ್ ಕೊಟ್ಟಲಗಿ, ದುರ್ಗಪ್ಪ ಮಾದರ, ಮಹದೇವ ಕೆಳಗಡೆ, ಕರೆಪ್ಪ ಗೌಡಿ, ಸಿದ್ದಪ್ಪ ಬಡಿಗೇರ, ಭೀಮಪ್ಪ ಮಲ್ಲಿಗಿ, ಭೀಮಪ್ಪ ದಳವಾಯಿ, ಸಾಹಿಲ್ ನದ್ಾ, ಗೂಳಪ್ಪ ಮೇಟಿ, ಪಕ್ಷದ ಕಾರ್ಯಕರ್ತರಿದ್ದರು.