ಜಿಲ್ಲೆ

ಸಿಗ್ನಲ್ ಮ್ಯಾನ್-1971 ಹಾಡು ಬಿಡುಗಡೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಕೆ.ಶಿವರುದ್ರಯ್ಯ ನಿರ್ದೇಶನದ ‘ಸಿಗ್ನಲ್ ಮ್ಯಾನ್-1971’ ಸಿನಿಮಾದ ಟ್ರೈಲರ್ ಮತ್ತು ಹಾಡುಗಳನ್ನು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಡುಗಡೆಗೊಳಿಸಲಾಯಿತು.


ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಈ ಚಿತ್ರದಲ್ಲಿ ಮೊದಲ ವಿಶ್ವಯುದ್ಧದ ಸಂಯುಕ್ತ ಸೇನೆಯ ಭಾಗವಾಗಿ ಮೈಸೂರು ಲ್ಯಾನ್ಸರ್ಸ್‌ನ ಶೌರ್ಯ ಮತ್ತು ಸಾಹಸಕ್ಕೆ ಗೌರವ ಸಲ್ಲಿಸಲಾಗಿದೆ.

ಮುಂಬರುವ ದಿನಗಳಲ್ಲಿ ಈ ಚಲನಚಿತ್ರವು ಮೈಸೂರು ಲ್ಯಾನ್ಸರ್ಸ್‌ನ ಪರಂಪರೆ, ನಮ್ಮ ಮೈಸೂರಿನ ಶ್ರೀಮಂತ ಇತಿಹಾಸ ಮತ್ತು ಧೈರ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಹೇಳಿದರು.

ನಟರಾದ ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ನಿರ್ದೇಶಕ ಕೆ.ಶಿವರುದ್ರಯ್ಯ, ನಿರ್ಮಾಪಕ ಬಿ.ವಿ.ಗಣೇಶ್‌ಪ್ರಭು ಇನ್ನಿತರರಿದ್ದರು.