ಜಿಲ್ಲೆ

ವಡ್ಡರಹಳ್ಳಿಯಲ್ಲಿ ಸಿಡಿಲಿಗೆ ಜೋಡೆತ್ತು ಬಲಿ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಸಾವಿರಾರೂ ರೂ ಮೌಲ್ಯದ ಜೋಡೆತ್ತುಗಳು ಮೃತಪಟ್ಟಿವೆ.

ಗ್ರಾಮದ ಪ್ರೇಮಚಂದ್ರ ಎಂಬುವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ. ಜಮೀನಿನಲ್ಲಿ ಉಳುಮೆ ಮಾಡಿ ಬಳಿಕ ಮನೆ ಮುಂಭಾಗದಲ್ಲಿ ಕಟ್ಟಿ ಹಾಕಿದ್ದರು. ಸಂಜೆ 5.30ರ ಸುಮಾರಿಗೆ ಗುಡುಗು, ಸಿಡಿಲು ಬಡಿದ ಹಿನ್ನೆಲೆಯಲ್ಲಿ ಎರಡು ಎತ್ತುಗಳು ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿವೆ. ಸುಮಾರು 80 ಸಾವಿರ ರೂ ಮೌಲ್ಯದ ಎತ್ತುಗಳನ್ನು ಕಳೆದುಕೊಂಡಿದ್ದು, ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.