ಜಿಲ್ಲೆ

ಎಚ್.ವಿಶ್ವನಾಥ್ ಅವರದ್ದು ಅತಿಯಾಸೆ

ಚಾಮರಾಜನಗರ: ಅತಿಯಾಸೆ ಇಟ್ಟುಕೊಂಡರೆ ಹೀಗೆ ಆಗೋದು ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ನಲ್ಲೂರುಮೊಳೆ ಗ್ರಾಮದಲ್ಲಿ ಗುರುವಾರ ಮಲ್ಲಿಗಮ್ಮ ದೇವಾಲಯ ಎಚ್.ವಿಶ್ವನಾಥ್ ಗೆ ಮಂತ್ರಿ ಸ್ಥಾನ ನೀಡದ ವಿಚಾರ‌ದ ಮಾತನಾಡಿದ ಅವರು, ಪಕ್ಷ ದ್ರೋಹ ಮಾಡಿದವರಿಗೆ ಜನರು ಸರಿಯಾಗಿ ತೀರ್ಮಾನ ಕೊಟ್ಟಿದ್ದಾರೆ. ಅತಿಯಾದ ದುರಾಸೆ ಇಟ್ಟುಕೊಂಡ್ರೆ ನಿರಾಸೆ ಆಗೋದು ಖಚಿತ‌ ಎಂದರು.

ಬಿಜೆಪಿ ಸರ್ಕಾರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ತೆರಿಗೆ ಹಣ ಸರಿಯಾಗಿ ನೀಡುತ್ತಿಲ್ಲ. ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ..

ನನ್ನ ಕಾಲದಲ್ಲಿ ಹಣಕಾಸಿನ ಸಮಸ್ಯೆಯಿರಲಿಲ್ಲ.

ಬಿಜೆಪಿ ನಾಯಕರು ಸುಳ್ಳು ಭರವಸೆ ನೀಡಿ ತಿರುಗುತ್ತಿದ್ದಾರೆ ಎಂದು ಹೇಳಿದರು.