ಜಿಲ್ಲೆ

ಸಿದ್ದು ಮಾಸ್ ಲೀಡರ್, ಈಶ್ವರಪ್ಪಗೆ ಮಹಾದೇವಪ್ಪ ತಿರುಗೇಟು

Davangere - Desk - Mahesh Babu E

ಚಿತ್ರದುರ್ಗ: ರಾಜ್ಯದ ಬಹುದೊಡ್ಡ ಮಾಸ್ ಲೀಡರ್ ಸಿದ್ದರಾಮಯ್ಯ ಎಂದು ಹೇಳುವ ಮೂಲಕ ಸಿದ್ದು ಲಾಟರಿ ಸಿಎಂ ಎಂಬ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ.ಮಹಾದೇವಪ್ಪ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ಅವರ ಮಿದುಳು ಮತ್ತು ನಾಲಿಗೆ ನಡುವೆ ಸಂಪರ್ಕ ಕಡಿತವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಸತ್ಯ ಎಂದು ಹೇಳಿದರು.

ರಾಜಕೀಯ ಹತಾಶೆಯಿಂದ ಮಾತನಾಡುತ್ತಿರುವ ಈಶ್ವರಪ್ಪ ಅವರನ್ನು ಬಿಜೆಪಿಯಲ್ಲೇ ಕ್ಯಾರೇ ಎನ್ನುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಎಚ್.ಆಂಜ ನೇಯ, ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ಮಾಯಕೊಂಡದ ಕೆ.ಎಸ್.ಬಸವಂತಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇದ್ದರು.