ಜಿಲ್ಲೆ

ಇಂಗು ತಿಂದ ಮಂಗನಾದ ಮುದ್ದುಹನುಮೇಗೌಡ ಎಂದ ಸಿದ್ದು

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಈ ಹಿಂದೆ 2014ರ ಲೋಕಸಭಾ ಚುನಾವಣೆ ವೇಳೆ ಪ್ರಚಾರಕ್ಕೆ ನಾನು ಬಂದಿದ್ದೆ. ಆಗ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಭಾರೀ ಬಹುಮತ ಕೊಟ್ಟಿದ್ರಾ. ಪಾಪ ಮುದ್ದಹನುಮೇಗೌಡರು ಈಗ ಬಿಜೆಪಿ ಹೋಗಿ ಇಂಗು ತಿಂದ ಮಂಗನಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಚಿಕ್ಕನಾಯಕಹಳ್ಳಿಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಕಿರಣ್‌ಕುಮಾರ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಸಿದ್ದರಾಮಯ್ಯ ಅವರು, ಎಸ್ಪಿಎಂಗೆ ನಾನು ಹೇಳಿದ್ದೆ ಅವರಿಗೆ, ಸ್ವಲ್ಪ ತಾಳ್ಮೆ ಇರಲಿ. ಮುಂದೆ ಪಾರ್ಲಿಮೆಂಟ್ ಬರುತ್ತೆ ಆಗ ನಿಲ್ಲುವಿರಂತೆ ಅಂದಿದ್ದೆ. ಇಲ್ಲ ನನಗೆ ಕುಣಿಗಲ್ ಟಿಕೆಟ್ ಸಿಗುತ್ತೆ ಅಂತಾ ಬಿಜೆಪಿಗೆ ಹೋದ್ರು. ಆದರೆ,ಅವರಿಗೇ ಸಿಕ್ಕಿದ್ದು ತಿರುಪತಿ ನಾಮ ಮಾತ್ರ ಎಂದು ಛೇಡಿಸಿದರು.